ಪ್ರಮುಖ ವೃತ್ತದಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪಿಸಿ : ನಿಂಗರಾಜ್ ಮಲ್ಲಾಡಿ

ಮೈಸೂರು, ಆಗಸ್ಟ್, 25, 2020(www.justkannda.in) : ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಪ್ರತಿಮೆಯನ್ನು ನಗರದ ಪ್ರಮುಖ ವೃತ್ತದಲ್ಲಿ ಸರಕಾರ ಸ್ಥಾಪನೆ ಮಾಡಬೇಕು ಎಂದು ದಸಂಸ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ ಹೇಳಿದರು.

jk-logo-justkannada-logo
ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಜಿಲ್ಲಾ ಸಮಿತಿ ವತಿಯಿಂದ ನಗರದ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 105ನೇ ಜಯಂತಿ ಅಂಗವಾಗಿ ವಂಚಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ದೇವರಾಜ ಅರಸು ಅವರು ಶೋಷಣೆಗೆ ಒಳಗಾದ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವಲ್ಲಿ ಹಗಲಿರುಳು ಶ್ರಮಿಸಿದವರಾಗಿದ್ದು, ಅವರನ್ನು ಗೌರವಿಸುವುದು, ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ನಮೂದಿಸಿರುವ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಬೇಕು. ಹುಟ್ಟು, ಸಾವುಗಳಿಗೆ ದಾಖಲೆಗಳಿಲ್ಲದೆ, ರಸ್ತೆ ಬದಿಗಳಲ್ಲಿ ಬದುಕುತ್ತಿರುವ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಸರಕಾರ ತಕ್ಷಣವೇ ಮನೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ನಿರ್ಗತಿಕ ಅಲೆಮಾರಿ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಇವರ ಮಕ್ಕಳಿಗೆ ಸರಕಾರವೇ ವಸತಿ ಶಾಲೆಗಳನ್ನು ಪ್ರತ್ಯೇಕವಾಗಿ ಆರಂಭಿಸಿ ಉನ್ನತ ಶಿಕ್ಷಣದವರೆಗೆ ಶಿಕ್ಷಣ ನೀಡಬೇಕು. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾವಂತ ಪದವಿ ಯುವಕ, ಯುವತಿಯರಿಗೆ ಸರಕರದ ವತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ಉಚಿತವಾಗಿ ಆರಂಭಿಸಬೇಕು ಎಂದು ಹೇಳಿದರು.
ಈ ಸಂದರ್ಭ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಕೆ.ನಂಜಪ್ಪ ಬಸವನಗುಡಿ, ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಜಾಗೃತಿ ಸಮಿತಿ ಸದಸ್ಯ ಎಚ್.ಬಿ.ದಿವಾಕರ್, ದಸಂಸ ಜಿಲ್ಲಾ ಸಂಚಾಲಕ ದೇವೇಂದ್ರ ಕೆ.ಎಂ.ವಾಡಿ, ಹರಿಹರ ಆನಂದಸ್ವಾಮಿ ಇತರರು ಉಪಸ್ಥಿತರಿದ್ದರು.

key words ; Install-statue-Devaraja arasu-important-circle-Ningaraj Malladi