ಮೈಸೂರು,ಅಕ್ಟೋಬರ್,15,2020(www.justkannada.in) : ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರಳ ದಸರಾ ಮಾಡಬೇಕಿತ್ತು. ಆದರೆ, ಈ ಸರ್ಕಾರದವರು ತೋರಿಕೆ ದಸರಾ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಆರ್. ಧೃವನಾರಾಯಣ್, ಕೊರೊನಾ ಸಂದರ್ಭದಲ್ಲಿ ದಸರಾವನ್ನ ಮನೆ, ಮನೆಯಲ್ಲಿ ಮಾಡಬೇಕಿತ್ತು. ದಸರಾಗೆ ಖರ್ಚು ಮಾಡುತ್ತಿರುವ ಹಣವನ್ನ ಕೊರೋನಾ ನಿರ್ವಹಣೆಗೆ ಬಳಸಬಹುದಿತ್ತು. ಆದರೆ ಈ ಸರ್ಕಾರದವರು ಅದನ್ನು ಬಿಟ್ಟು ಬೇರೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ನಿಲ್ಲುತ್ತಿಲ್ಲ. ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಕೊರೊನಾ ನಿಯಂತ್ರಣ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಮಾಡದ ಕೆಲಸವನ್ನ ಆರೋಗ್ಯ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.
key words : Instead-simple-Dasara-2020-government-doing-Dussehra-Former-MP R.Dhruvanarayan