ಬೆಂಗಳೂರು, ನವೆಂಬರ್,27,2020(www.justkannada.in): ಖಾಸಗಿ ಶಾಲೆಗಳ ಶಿಕ್ಷಣದ ಶುಲ್ಕ ಕಡ್ಡಾಯವಾಗಿ ಪಾವತಿಸುವಂತೆ ಫೋಷಕರಿಗೆ ನಿರ್ದೇಶನ ನೀಡಿ ಎಂದು ಸರ್ಕಾರಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಸುಧಾಕರ್ ಎಸ್ ಶೆಟ್ಟಿ ಅವರು, ಆನ್ಲೈನ್ ಶಿಕ್ಷಣ ಕಳೆದ 8 ತಿಂಗಳಿoದ ನಡೆಯುತ್ತಿದ್ದು, ಶಿಕ್ಷಕರು ಶಾಲೆಗಳಿಂದ ಆನ್ಲೈನ್ ಶಿಕ್ಷಣ ನೀಡುತ್ತಿದ್ದಾರೆ. ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಇತರೇ ನೌಕರರ ಸಂಬಳವನ್ನು ನೀಡಲು ಶಾಲೆ ಶುಲ್ಕವನ್ನೇ ಅವಲಂಬಿಸಿರುತ್ತಾರೆ.
ದುರಾಷ್ಟವಶಾತ್ ಇತ್ತೀಚಿನ ಸರ್ಕಾರದ ಪತ್ರಿಕಾ ಹೇಳಿಕೆ ಖಾಸಗಿ ಶಾಲೆಗಳು ಶುಲ್ಕವನ್ನು ನೀಡದೆ ಇರುವ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕೆಂದು ಹೇಳಿದರು ಪೋಷಕರು ಮತ್ತು ಶಾಲೆ ಮಂಡಳಿ ಮತ್ತು ಸಾರ್ವಜನಿಕರಿಗೆ ಗೊಂದಲ ಉಂಟಾಗಿದೆ.
ಈಗಾಗಲೇ 2019-20ರ ಪರೀಕ್ಷೆಗಳು ಮಾರ್ಚ್ 2020ರಂದು ಪರೀಕ್ಷೆ ಸಂಪೂರ್ಣ ಗೊಂಡಿದ್ದು ವಿದ್ಯಾರ್ಥಿಗಳು ತೇರ್ಗೆಡೆಗೊಂಡಿದ್ದು ಕಳೆದ 2019-20 ಸಾಲಿನ ಶಾಲಾ ಶುಲ್ಕವನ್ನು ಪೋಷಕರು ಕಟ್ಟಿಲ್ಲ ಹಾಗೂ 2020-21 ನೇ ಸಾಲಿನ ಸುಮಾರು 7 ತಿಂಗಳ ಆನ್ಲೈನ್ ಶುಲ್ಕಗಳು ಬಾಕಿ ಇದ್ದು ಸರ್ಕಾರದ ಈ ಹೇಳಿಕೆಯಿಂದ ಮೊದಲೆ ಶುಲ್ಕ ಕಟ್ಟದೆ ಇದ್ದ ಪೋಷಕರು ಈ ಹೇಳಿಕೆಯಿಂದಾಗಿ ಈ ವರ್ಷ ಸಂಪೂರ್ಣ ಶುಲ್ಕವನ್ನು ಕಟ್ಟದೇ ಇರುವಂತೆ ಸರ್ಕಾರವೇ ಪ್ರೇರೇಪಣೆಯನ್ನು ನೀಡಿದಂತಾಗಿದೆ.
ಇದರಿಂದ ಶಾಲಾ ಶಿಕ್ಷಕರ ವೇತನವನ್ನು, ವಿದ್ಯುತ್ ಬಿಲ್, ನೀರಿನ ಬಿಲ್, ಹಾಗೂ ಇತರೇ ಸರ್ಕಾರಕ್ಕೆ ಪಾವತಿಬೇಕಾದ ಇಎಸ್ಐ, ಪಿ.ಎಫ್, ಯಾವುದೇ ಹಣವನ್ನು ಕಟ್ಟಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಮಾಣವಾಗಿದೆ. ಸರ್ಕಾರವು ಶಾಲೆಗಳ ಶಿಕ್ಷಣದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸುವಂತೆ ಎಲ್ಲಾ ಪೋಷಕರಿಗೆ ನಿರ್ದೇಶನ ನೀಡುವಂತೆ ತಮ್ಮಲ್ಲಿ ಮನವಿ ಮಾಡುತ್ತೇವೆ. ಹಾಗೂ ಸರ್ಕಾರ ಹೇಳಿಕೆ ನೀಡದೇ ಇದ್ದಲ್ಲಿ ಖಾಸಗಿ ಶಿಕ್ಷಣ ಸಂಬಳ, ತೆರಿಗೆ, ವಿದ್ಯುತ್ ಬಿಲ್, ಹಾಗೂ ಅಸ್ತಿ ತೆರಿಗೆಗಳನ್ನು ಒಂದು ವರ್ಷದ ಅವಧಿಗೆ ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಸುಧಾಕರ್ ಎಸ್ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.
Key words: Instruct – facilitators -pay – tuition fees – private schools-Sudhakar S Shetty- appeals – Govt.