“ಬೌದ್ಧಿಕ ಆಸ್ತಿ (ಐಪಿ) ಮಾಲೀಕತ್ವ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ಅಗತ್ಯ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಫೆಬ್ರವರಿ,19,2021(www.justkannada.in) :  ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಬೌದ್ಧಿಕ ಆಸ್ತಿ (ಐಪಿ)ಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮಗಳಲ್ಲಿ ಬೌದ್ಧಿಕ ಆಸ್ತಿ (ಐಪಿ) ಮಾಲೀಕತ್ವ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.Intellectual-Property (IP)-Ownership-management-Much more-Emphasis-needed-Chancellor-Prof G.Hemant Kumar

ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮೈಸೂರು ವಿವಿ ಬೌದ್ಧಿಕ ಆಸ್ತಿ   ಹಕ್ಕುಗಳು ಕೋಶದ ವತಿಯಿಂದ ಆಯೋಜಿಸಿದ್ದ “ ಪೇಟೆಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಏಳಿಗೆ ಕುರಿತು ಜಾಗೃತಿ” ಒಂದು ದಿನದ ಕಾರ್ಯಗಾರಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.

ಪದವೀಧರರನ್ನು ನಾವೀನ್ಯತೆಯ ಉತ್ಪಾದಕ ಪ್ರಜೆಗಳಾಗಿ ರೂಪಿಸಲು ಪಠ್ಯಕ್ರಮದಲ್ಲಿ ಬೌದ್ಧಿಕ ಆಸ್ತಿ (ಐಪಿ) ಮಹತ್ವದ ಕುರಿತು ಪರಿಗಣಿಸಬೇಕಿದೆ. ಬೌದ್ಧಿಕ ಆಸ್ತಿ (ಐಪಿ) ಜ್ಞಾನವು ಕಾನೂನು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಅದರ ಮೌಲ್ಯದ ಬಗ್ಗೆ ಇತರರಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಸಲಹೆ ನೀಡಿದರು.

ಬೌದ್ಧಿಕ ಆಸ್ತಿ ಹಕ್ಕುಗಳು ಶೈಕ್ಷಣಿಕ ಮತ್ತು ಸಾರ್ವಜನಿಕ ಸಂಶೋಧನಾ ಸಂಸ್ಥೆಗಳಿಗೆ ನೇರ ಕೊಡುಗೆಗಳಾಗಿದೆ. ನಾವೀನ್ಯತೆ ಮತ್ತು ಸಂಶೋಧನೆ ಹಾಗೂ ವಿಶೇಷವಾಗಿ ಉದಯೋನ್ಮುಖ ಆರ್ಥಿಕತೆಗಳು. ಉನ್ನತ ಶಿಕ್ಷಣದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಾಮುಖ್ಯತೆ (ಐಪಿಆರ್)ಯನ್ನು ಪ್ರಮುಖವಾಗಿ ಗುರುತಿಸಬಹುದಾಗಿದೆ ಎಂದು ಹೇಳಿದರು.

2016ರ ಮೇ ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ರಾಷ್ಟ್ರೀಯ ಐಪಿಆರ್ ನೀತಿಯನ್ನು ಅನುಮೋದಿಸಲಾಗಿದ್ದು, ಇದು ಭಾರತ ಸರ್ಕಾರದಿಂದ ರೂಪುಗೊಂಡ ಮೊದಲ ಐಪಿಆರ್ ನೀತಿಯಾಗಿದೆ. ಈ ನೀತಿಯ ಪ್ರಾಥಮಿಕ ಗಮನವು ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವುದಾಗಿದೆ ಎಂದು ತಿಳಿಸಿದರು.

Intellectual-Property (IP)-Ownership-management-Much more-Emphasis-needed-Chancellor-Prof G.Hemant Kumar

ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಎಎಲ್ ಎಂಟಿ ಹಿರಿಯ ಕಾನೂನು ಸಲಹೆಗಾರ ಡಾ.ಎಂ.ಎನ್.ಭೀಮೇಶ್, ಎಎಲ್ ಎಂಟಿ ಕಾನೂನು ಪೇಟೆಂಟ್ ಏಜೆಂಟ್ ರಾಕೇಶ್ ಬಾಬು, ಮೈಸೂರು ವಿವಿ ಬೌದ್ಧಿಕ ಆಸ್ತಿ   ಹಕ್ಕುಗಳು ಕೋಶದ ಸಂಯೋಜಕಿ ಡಾ.ಅಸ್ನ ಯುರೂಜ್, ಸಹ ಸಂಯೋಜಕಿ ಡಾ.ಸುಭಾ ಗೋಪಾಲ್ ಇತರರು ಇದ್ದರು.

ENGLISH SUMMARY….

More stress on Intellectual Property and Management required: MoU VC
Mysuru, Feb. 19, 2021 (www.justkannada.in): “More stress should be given for Intellectual Property and Ownership and Management keeping in mind the importance of Intellectual Property in today’s global economy,” opined Prof. G. Hemanth Kumar, Vice-Chancellor, University of Mysore.
He inaugurated a one-day workshop on the topic, “Awareness on Improvement in Patent and Intellectual Property Rights,” organized by the Intellectual Property Rights Cell of the University of Mysore.
“To make the graduates innovative producing citizens giving importance for Intellectual Property in the curriculum should be considered. Intellectual Property knowledge should not be limited to law students alone and instead, efforts should be made to create awareness about its value for others too,” he suggested.
“The Union Cabinet Ministry has approved the National IPR policy in May 2016, and it is the first IPR policy that is formed by the Government of India. The primary focus of this policy is encouraging innovation and creativity,” he added.Intellectual-Property (IP)-Ownership-management-Much more-Emphasis-needed-Chancellor-Prof G.Hemant Kumar
Prof. R.Shivappa, Registrar, University of Mysore, Dr. M.N.Bheemesh, Senior Law Advisor, ALMT, Rakesh Babu, Law Patent Agent, ALMT, Dr. Asna Yuruz, Coordinator, Intellectual Property Rights Cell, University of Mysore, Dr. Shubha Gopal, Assistant Coordinator were present.
Keywords: Intellectual Property/ University of Mysore/ National IPR policy

key words : Intellectual-Property (IP)-Ownership-management-Much more-
Emphasis-needed-Chancellor-Prof G.Hemant Kumar