ಬೆಂಗಳೂರು,ಜುಲೈ,15,2023(www.juskannada.in): ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ ‘ಬಿ.ಸಿ.ಎಸ್ ನಾರಾಯಣ್ 37 ನೇ ಅಂತರ ವರ್ಗೀಯ ನಾಟಕ ಸ್ಪರ್ಧೆ’ಗೆ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ನಟ, ನಿರ್ಮಾಪಕ ಶ್ರೀನಗರ ಕಿಟ್ಟಿ ” ಕಾಲೇಜಿನ ಇದೇ ರಂಗದ ಮೇಲೆ ಅನೇಕ ನಾಟಕಗಳನ್ನು ಅಭಿನಯಿಸಿದ ದಿನಗಳನ್ನು, ಹೆಚ್.ಎನ್. ನರಸಿಂಹಯ್ಯನವರ ಒಡನಾಟವನ್ನು ಎಂದಿಗೂ ಮರೆಯುವಂತಿಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇದು ರಹದಾರಿ, ಈ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನು ಮೂರು ದಿನಗಳ ಕಾಲ ನಡೆಯಲಿರುವ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ನಿರ್ದೇಶಿಸಿ, ನಟಿಸುವ ಅನೇಕ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಸಮಾರಂಭದಲ್ಲಿ ನ್ಯಾಷನಲ್ ಕಾಲೇಜು ಅಧ್ಯಕ್ಷ ಡಾ.ಎಚ್.ಎನ್.ಸುಬ್ರಮಣ್ಯ, ಡಾ.ಪಿ.ಎಲ್.ವೆಂಕಟರಾಮರೆಡ್ಡಿ ಪ್ರಾಂಶುಪಾಲ ಡಾ. ಬಿ.ಸುರೇಶ, ಉಪ ಪ್ರಾಂಶುಪಾಲರಾದ ಪ್ರೊ. ಚೆಲುವಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ ಕಾರ್ಯಕ್ರಮದ ಸಂಚಾಲಕರಾದ ಡಾ.ಬಿ.ಸವಿತಾ, ಡಾ. ಬಿ. ಪಾಪಣ್ಣ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Key words: Inter-class -drama -competition – National College