ಅಂತಾರಾಷ್ಟ್ರೀಯ ಸಮ್ಮೇಳನ: ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ – ಶೈಲೇಶ್ ಹರಿಭಕ್ತಿ.

ಮೈಸೂರು,ನವೆಂಬರ್,4,2022(www.justkannada.in):  ವಿಶ್ವಕ್ಕೆ ಜಾಗತಿಕ ತಾಪಮಾನ ಕಾಡುತ್ತಿದ್ದು, ಹೊಸ ಹೊಸ ನೀತಿಗಳನ್ನು ಜಾರಿಗೆ ತರುವ ಮೂಲಕ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ ಎಂದು  ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮದ ಸಮನ್ವಯಾಧಿಕಾರಿ ಶೈಲೇಶ್ ಹರಿಭಕ್ತಿ ತಿಳಿಸಿದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಜ್ಞಾನ ಪಾಲುದಾರಿಕೆ ಎಂಬ ವಿಷಯದ ಬಗ್ಗೆ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಸುಸ್ಥಿರ ಅಭಿವೃದ್ಧಿ ‌ಕಾರ್ಯಕ್ರಮವನ್ನು ಭಾರತವು ಅನುಷ್ಠಾನಕ್ಕೆ ತಂದಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಳೆದ ಮೂರು ವರ್ಷದ ಹಿಂದೆ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳು ಮುನ್ನಲೆಗೆ ಬಂದವು. ಆದರೆ, ನಂತರ ಇದು ನಿಧಾನಗತಿಯಲ್ಲಿ ಸಾಗಲು ಶುರುವಾಯಿತು. ಆದರೆ, ಇದೀಗ ಮತ್ತೆ ಸುಸ್ಥಿರತೆ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.

ಅದೈತ್ವ ಸಿದ್ಧಾಂತದಲ್ಲಿ ಶಂಕರಾಚಾರ್ಯರು ಸುಸ್ಥಿರ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಹಳ ಹಿಂದಿನ ಕಾಲದಿಂದಲೂ ಇದರ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಅರ್ಥಶಾಸಜ್ಞರು ಹೇಳುವ ಪ್ರಕಾರ ಅಭಿವೃದ್ಧಿ ವಿಚಾರದಲ್ಲಿರುವ ನಮ್ಮ ಗುರಿಯನ್ನು ಬದಲಾಯಿಸಿಕೊಳ್ಳಬೇಕಿದೆ. ಜಾಗತಿಕ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಪರಿಸರಕ್ಕೆ ಇಲ್ಲ. ಹಾಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ. ಅದಕ್ಕೆ ಬೇಕಾದ ಪಾಲಿಸಿಗಳನ್ನು ಜಾರಿಗೆ ತರಬೇಕಿದೆ ಎಂದು ಕಿವಿಮಾತು ಹೇಳಿದರು.

ಹಳ್ಳಿ, ಜಿಲ್ಲೆ, ರಾಜ್ಯ, ದೇಶ ಹಾಗೂ ಜಗತ್ತಿನ ಎಲ್ಲೆಡೆ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಿದೆ. ರಮಣಮಹರ್ಷಿ ಹೇಳಿರುವಂತೆ ಏನೇ ಬದಲಾವಣೆಗಳಿದ್ದರೂ ಅದು ನಮ್ಮಿಂದಲೇ ಶುರುವಾಗಬೇಕು ಎಂದು ಹೇಳಿದ್ದರು. ಇದೊಂದು ಸವಾಲಿನ ಕೆಲಸ. ಇದರ ನಾಯಕತ್ವವನ್ನು ಭಾರತ ಸ್ವೀಕರಿಸಬೇಕಿದೆ. ಜಾಗತಿಕ ತಾಪಮಾನದಿಂದ ಹಲವು ತೊಂದರೆಗಳು ಉಂಟಾಗಿದೆ. ಕೆನಡಾದಲ್ಲಿ ಪ್ರವಾಹ, ಚೀನಾದಲ್ಲಿ ಬರಗಾಲ ಬಂದಿದೆ. ಹಲವು ಕಡೆ ಪೆಂಗ್ವಿನ್‌ ಗಳು ಸಾಯುತ್ತಿವೆ. ಜಾಗತಿಕವಾಗಿ ವನ್ಯಜೀವಿ ಸಂತತಿ ಶೇ.69ರಷ್ಟು ಕಡಿಮೆ ಆಗಿದೆ. ಇನ್ನಾದರೂ ಜೀವ ವೈವಿಧ್ಯತೆ ಬಗ್ಗೆ ನಾವು ಮಾತನಾಡದಿದ್ದರೆ ಜಗತ್ತಿಗೆ ಅಪಾಯ ಕಾದಿದೆ ಎಂದರು.

ಸುಸ್ಥಿರ ಅಭಿವೃದ್ಧಿಗೆ ಭಾರತ ಒಂದು ಆ್ಯಕ್ಷನ್ ಪ್ಲ್ಯಾನ್ ತಂದಿದೆ. ಇದು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಐಟಿ ಸೆಕ್ಟರ್‌ ನಲ್ಲಿ ಶೇ.50ರಷ್ಟು ಸೇವೆ ಕಾರ್ಬನ್‌ ನಿಂದ ಮುಕ್ತವಾಗಿದೆ. ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಪರಿಸರ ಸ್ನೇಹಿ ವಲಯ ಎಲ್ಲಾ ಕ್ಷೇತ್ರದಲ್ಲೂ ಬರಬೇಕು. ಪಿಎಂ ಕೇರ್‌ ನಲ್ಲಿ ಹೇಗೆ ಹಣ ಇಡಲಾಗಿದೆಯೋ ಅದೇ ರೀತಿ ಸಿಎಸ್‌ ಆರ್  ಫಂಡ್ ಅಡಿ ಹಣ ಇಡಬೇಕಿದೆ ಎಂದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಜಾಗತಿಕ ತಾಪಮಾನದಿಂದ ಇದೀಗ ಅಂತರ್ಜಲ ಕೆಳಮಟ್ಟಕ್ಕೆ ಇಳಿಯುತ್ತಿದೆ. ನಾನು 10 ವರ್ಷ ಒಂದು ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡಿದ್ದೆ. ಹಾಗಾಗಿ ನಮಗಿರುವ ಒಂದೇ ಭೂಮಿಯನ್ನು ರಕ್ಷಿಸಿಕೊಳ್ಳಬೇಕಿದೆ. ಎಲ್ಲಾ ವಿಭಾಗದವರು ಜಾಗತಿಕ ತಾಪಮಾನದ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಆದರೆ, ಇವರೆಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಿದರೆ ಪರಿಣಾಕಾರಿಯಾಗಿರುತ್ತದೆ ಎಂದರು.

ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾತನಾಡಿದರು. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬ್ಯಾಂಕಾಕ್ ಪ್ರೊ. ಲಾರೆನ್ಸ್‌ ಸುರೇಂದ್ರ, ಪ್ರೊ. ಡಿ.ಆನಂದ್ ಸೇರಿದಂತೆ ಇತರರು ಇದ್ದರು.

Key words: International –conference-mysore university- Nature – preserved – future generations.

ENGLISH SUMMARY..

International Conference: We have to conserve nature for our future generations – Shailesh Haribhakti
Mysuru, November 4, 2022 (www.justkannada.in): “The world is facing the problem of global warming. Hence, there is a need to introduce effective policies and protect the nature for our future generations,” observed Shylesh Haribhakti, Coordinating Officer, Sustainable Development Program.
He participated in the International Conference on the topic, “Knowledge Partners to achieve United Nations Sustainable Development Goals,” held at the Rani Bahaddur auditorium, in the Manasa Gangotri campus.
“Implementation of the Sustainable Development program is a model for the entire world. The sustainable development programs came to the fore three years ago. However, it started to move very slowly after that. But now it is happy to see that it has gained momentum,” he said.
The sustainable development programs should be implemented in all the villages, districts, states and the country. This work is a challenge and India has to accept in leading it. We are facing several problems to the global warming. As a result of this there was floods in Canada, drought in China. In several countries penguins are dying. On a whole the percentage of wild life has decreased by 69%. If we won’t consider this seriously and do something concretely, the world will face danger,” he observed.
“India has developed an action plan for sustainable development. It should be implemented effectively. Nearly 50% of the services in the IT sector is free of carbon. They are giving more priority for greenery. All the sectors should adopt environment-friendly concept. Grants should be reserved under CSR funds like in PM Care fund,” he said.
Prof. G. Hemanth Kumar, Vice-Chancellor, University of Mysore spoke on the occasion. Prof. Lawrence Surendra, Prof. D. Anand and others attended the International Conference.
Keywords: International Conference/ Global warming/ University of Mysore