ಬೆಂಗಳೂರು,ಫೆಬ್ರವರಿ,17,2021(www.justkannada.in): ಇತ್ತೀಚೆಗೆ ಸಂಸದೀಯ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆ ಫೆಬ್ರವರಿ 24 ರಂದು ಆತ್ಮಾವಲೋಕ ಸಭೆಯನ್ನ ಆಯೋಜನೆ ಮಾಡಲಾಗಿದ್ದು ಸಭೆಗೆ ಸಮಾಜದ ವಿವಿಧ ಕ್ಷೇತ್ರದ 150 ಗಣ್ಯರಿಗೆ ಆಹ್ವಾನ ನೀಡಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಇಂದು ಸುದ್ಧಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಫೆಬ್ರವರಿ 24 ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಆತ್ಮಾವಲೋಕನ ಸಭೆ ನಡೆಯಲಿದೆ. ಸಮಾಜದ ವಿವಿಧ ಕ್ಷೇತ್ರದ 150 ಗಣ್ಯರಿಗೆ ಆಹ್ವಾನ ನೀಡಿದ್ದೇನೆ ಸಿಎಂ, ಪ್ರತಿಪಕ್ಷ ನಾಯಕರು, ಸಚಿವರು, ಶಾಸಕರು, ಸಂಸದರು ಎಲ್ಲಾರು ಇರ್ತಾರೆ. ಮಾಜಿ ಸಿಎಂ ಎಸ್. ಎಂ ಕೃಷ್ಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿ.ಕೆ ಚಂದ್ರಶೇಖರ್, ಪಿಜಿಆರ್ ಸಿಂಧ್ಯಾ ಸೇರಿ ಹಿರಿಯ ರಾಜಕಾರಣಿಗಳೂ ಸಭೆಗೆ ಬರುತ್ತಾರೆ. ಜತೆಗೆ ಜಸ್ಟೀಸ್ ಫಣೀಂದ್ರ ಸೇರಿ ನಿವೃತ್ತ ನ್ಯಾಯಾಧೀಶರಿಗೂ ಆಹ್ವಾನ ನೀಡಲಾಗಿದ್ದು , ಮಾಧ್ಯಮ ಕ್ಷೇತ್ರದ ಎಲ್ಲಾ ಸಂಪಾದಕರನ್ನೂ ಸಭೆಗೆ ಕರೆದಿದ್ದೇವೆ ಎಂದು ತಿಳಿಸಿದರು.
ಹಾಗೆಯೇ ಸಭೆಗೆ ಸಾಹಿತಿಗಳು, ವಿಧಾನ ಪರಿಷತ್ ಹಿರಿಯ ಸದಸ್ಯರಿಗೂ ಆಹ್ವಾನ ನೀಡಲಾಗಿದ್ದು, ಯಾವುದೇ ವ್ಯಕ್ತಿ, ಪಕ್ಷದ ತತ್ವ ಸಿದ್ಧಾಂತದಿಂದ ಮಾಡ್ತಿಲ್ಲ. ಉತ್ತಮವಾದ ವ್ಯವಸ್ಥೆ ನಿರ್ಮಾಣ ಮಾಡಲು ಈ ಸಭೆ ಆಯೋಜನೆ ಮಾಡಿದ್ದೇವೆ. ಬಸವರಾಜ ಹೊರಟ್ಟಿ, ನಾನು ಸೇರಿ ಸಮಾಲೋಚನೆ ಸಭೆ ಮಾಡ್ತಿದ್ದೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Key words: Introspection -Meeting – 24th February-invitation -150 elites –speaker –vishweshwara hedge kageri