ನವದೆಹಲಿ,ಡಿಸೆಂಬರ್,9,2021(www.justkannada.in): ತಮಿಳುನಾಡಿನ ಊಟಿಯ ಕೂನೂರ್ ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಸಂಭವಿಸಿದ ಹೆಲಿಕಾಪ್ಟರ್ ದುರಂತದ ಬಗ್ಗೆ ಈಗಾಗಲೇ ವಾಯುಸೇನೆ ತನಿಖೆ ಶುರುಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ದುರಂತದ ಬಗ್ಗೆ ಲೋಕಸಭೆಯಲ್ಲಿ ವಿವರ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, 11ಗಂಟೆ 48 ನಿಮಿಷಕ್ಕೆ ಏರ್ ಬೇಸ್ ನಲ್ಲಿ ಟೇಕ್ ಆಫ್ ಆದ ವಿಮಾನ 12.15ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ 12.08ಕ್ಕೆ ಸಂಪರ್ಕ ಕಳೆದುಕೊಂಡು ದುರಂತ ಸಂಭವಿಸಿದೆ. ಪತನವಾದ ಹೆಲಿಕಾಪ್ಟರ್ ಅನ್ನ ಮೊದಲು ಸ್ಥಳೀಯರು ನೋಡಿದ್ದಾರೆ. ದುರಂತದಲ್ಲಿ ಸಿಡಿಎಸ್ ರಾವತ್ ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವರುಣ್ ಸಿಂಗ್ ಗೆ ಜೀವರಕ್ಷಕಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಲಿಕಾಪ್ಟರ್ ದುರಂತದ ತನಿಖೆಯನ್ನು ಆರಂಭಿಸಿದ್ದೇವೆ. ವಾಯುಸೇನೆ ಸಮಿತಿಯನ್ನು ರಚಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಮೃತರ ಪಾರ್ಥಿವ ಶರೀರಗಳನ್ನು ಇಂದು ಸಂಜೆ ದೆಹಲಿಗೆ ತರಲಾಗುತ್ತಿದ್ದು, ನಾಳೆ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
Key words: investigation – helicopter -disaster -Union Home Minister- Rajnath Singh
ENGLISH SUMMARY…
Investigation on chopper crash begins: Defence Minister Rajnath Singh offers tributes
New Delhi, December 9, 2021 (www.justkannada.in): The Indian Air Force has commenced the investigation in the helicopter crash incident that took place at Coonoor in Ooty, Tamil Nadu yesterday, as informed by Defence Minister Rajnath Singh.
Providing information in the parliament about the unfortunate incident Defence Minister Rajnath Singh said the chopper took off from the airbase at 11.48 am and was scheduled to land at 12.15 pm. But it lost the network at 12.08 pm and crashed. The local people saw the helicopter crash. Including CDS Bipin Rawat, a total number of 13 people have lost their lives in the incident. Group Captain Varun Singh, who was injured in the incident is being treated at the Wellington Hospital.
“We have commenced the investigation into the incident. An IAF committee has been formed to investigate. The bodies will be brought to New Delhi today evening, and will be cremated with all army respect,” he said.
Keywords: Defence Minister/ Rajnath Singh/ Parliament/ chopper crash/ investigation begins