ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಲಿ- ಸಚಿವ ಎಂ.ಸಿ ಸುಧಾಕರ್

ಚಿಕ್ಕಬಳ್ಳಾಪುರ,ಜೂನ್,21,2024 (www.justkannada.in): ನೀಟ್- ಯುಜಿ ಪರೀಕ್ಷೆಯ  ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಸಿ ಸುಧಾಕರ್, ನೀಟ್ ಪರೀಕ್ಷೆ  ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಬೇಕು. ನೀಟ್ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸುವುದು ತುಂಬಾ ಕಡಿಮೆ. ಈ ಬಾರಿ 65 ರಿಂದ 67 ಮಂದಿ  720 ಅಂಕ ಗಳಿಸಿದ್ದಾರೆ  ಒಂದೆರಡು ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು ಮಾಡಿದ್ದಾರೆ.  ಈ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವಂದ್ವ ನಿಲುವು ತಾಳಿದೆ ಎಂದು ಕಿಡಿಕಾರಿದರು.

ನೆಟ್ ಪರೀಕ್ಷೆಯಲ್ಲಿ ಅಕ್ರಮ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಸಿ ಸುಧಾಕರ್,  ನಮ್ಮ ರಾಜ್ಯದಲ್ಲಿ ನೆಟ್ ಪರೀಕ್ಷೆ ಬಗ್ಗೆ ಅಷ್ಟಾಗಿ  ದೂರು ಕೇಳಿ ಬಂದಿಲ್ಲ.  ಕೆಲ ರಾಜ್ಯಗಳಲ್ಲಿ ನೆಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ.  ನೆಟ್ ಪರೀಕ್ಷೆಯಲ್ಲಿ ಸಾಕಷ್ಟು ಗೊಂದಲವಿದೆ ಎಂದರು.

Key words: investigation, NEET, exam, Minister, M.C Sudhakar