ತುಮಕೂರು,ಏಪ್ರಿಲ್,29,2023(www.justkannada.in): ನಿನ್ನೆ ಪ್ರಚಾರದ ವೇಳೆ ಕಲ್ಲೇಟು ಬಿದ್ದು ತಲೆಗೆ ಗಾಯವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಘಟನೆ ಬಗ್ಗೆ ವಿವರ ನೀಡಿದ್ದಾರೆ.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್, ನಿನ್ನೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ವೇಳೆ ನನ್ನನ್ನ ಮೇಲಕ್ಕೆ ಎತ್ತಬೇಡಿ ಎಂದೆ. ಆದರೂ ಕಾರ್ಯಕರ್ತರು ಎತ್ತುಕೊಂಡರು ಜೆಸಿಬಿ ಮೂಲಕ ಹೂ ಹಾಕಲು ಕಾರ್ಯಕರ್ತರು ರೆಡಿ ಮಾಡಿದ್ದರು. ಈ ವೇಳೆ ತಕ್ಷಣ ತಲೆಗೆ ಏನೋ ಹೊಡೆದಂಗಾಯಿತು. ಕೆಂಪು ಹೂವು ಆಗಿದ್ದರಿಂದ ಯಾರಿಗೂ ಏನು ಅಂತಾ ಗೊತ್ತಾಗಲಿಲ್ಲ ತಲೆಗೆ ಕಲ್ಲು ಬೀಳುತ್ತಿದ್ದಂತೆ ಜೋರಾಗಿ ಕೂಗಿದೆ. ನಂತರ ಕೆಳೆಗೆ ಇಳಿಸಿದ್ದು ಆಸ್ಪತ್ರೆಗೆ ತೆರಳಿದೆ. ವೈದ್ಯರ ಬಳಿ ಚರ್ಚಿಸಿ ಪ್ರಚಾರಕ್ಕೆ ಹೋಗುತ್ತೇನೆ. ನನಗೆ ಯಾವುದೇ ತೊಂದರೆಯಾದ್ರೂ ತಲೆಕೆಡಿಸಿಕೊಳ್ಳಲ್ಲ. ಹೆದರಿಕೊಂಡು ಓಡಿಹೋಗಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದರು.
ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶಾಂತಿಯಿಂದ ಚುನಾವಣೆ ಎದುರಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಇನ್ನೂ ಘಟನೆ ಬಗ್ಗೆ ತನಿಖೆ ಮಾಡಲು ಎಸ್ಪಿಗೆ ಸೂಚಿಸಿದ್ದೇನೆ. 1999 ರಲ್ಲಿ ನನಗೆ ಚಾಕುವಿನಿಂದ ಚುಚ್ಚಲು ಪ್ರಯತ್ನಿಸಿದ್ದರು. ಪದೇ ಪದೇ ಇಂತಹ ಘಟನೆಗಳು ಯಾಕೆ ಆಗುತ್ತಿವೆ ಗೊತ್ತಿಲ್ಲ. ತನಿಖೆ ಮಾಡಿ ಘಟನೆ ಬಗ್ಗೆ ಸತ್ಯಾಸತ್ಯತೆ ಬಗ್ಗೆ ತಿಳಿಸಲು ಸೂಚಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
Key words: investigation -stoning-incident- Former DCM -Dr. G. Parameshwar.