ಹೂಡಿಕೆದಾರರ ಸಮಾವೇಶ: ಡಿಸಿಎಂ ಮತ್ತು ಸಚಿವರಿಂದ ಸಿದ್ಧತೆ ಪರಿಶೀಲನೆ

ಬೆಂಗಳೂರು,ಫೆಬ್ರವರಿ,10,2025 (www.justkannada.in): ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ  ಪಾಟೀಲ ಅವರು  ಫೆ.11ರಿಂದ ಆರಂಭವಾಗುವ ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆಗಳನ್ನು ಸೋಮವಾರ ಪರಿಶೀಲಿಸಿದರು.

ಸಮಾವೇಶ ನಡೆಯಲಿರುವ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಇಬ್ಬರೂ ಮುಖಂಡರು ಪ್ರದರ್ಶನ ತಾಣಗಳು, ಗೋಷ್ಠಿಗಳು ನಡೆಯಲಿರುವ ಸ್ಥಳಗಳು, ಮಾತುಕತೆ ಮತ್ತು ಒಡಂಬಡಿಕೆ ನಡೆಯಲಿರುವ ಸಭಾಂಗಣಗಳು, ಕಂಟ್ರಿ ಪೆವಿಲಿಯನ್, ಫುಡ್ ಕೋರ್ಟ್ ಮುಂತಾದ ಜಾಗಗಳನ್ನು ಖುದ್ದಾಗಿ ವೀಕ್ಷಿಸಿ, ಅಂತಿಮ ಕ್ಷಣಗಳ ಕೆಲವು ಸುಧಾರಣೆಗಳತ್ತ ಗಮನ ಹರಿಸಿ, ಸಲಹೆಗಳನ್ನು ನೀಡಿದರು.

ಜತೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Key words: Investors, conference, DCM DK Shivakumar, Minister, MB Patil