ಮೈಸೂರು,ಮಾರ್ಚ್,3,2023(www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಅದರ ಸಂಸ್ಥಾಪಕ ಅಧ್ಯಕ್ಷರು ಮತ್ತು ಕರ್ನಾಟಕದ ಖ್ಯಾತ ಸ್ತ್ರೀವಾದಿ ವಿಮರ್ಶಕರು ಹಾಗೂ ಲೇಖಕರೂ ಆದ ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ‘ ಗೆ 2019 ರಿಂದ 2022ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಿದೆ.
ಈ ಅವಧಿಯಲ್ಲಿ ಪ್ರಕಟವಾಗಿ ಮೊದಲ ಮುದ್ರಣವನ್ನು ಕಂಡಿರುವ ಕೃತಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಯಾವುದೇ ಪದವಿಗಾಗಿ ಸಲ್ಲಿಸಿದ ನಿಬಂಧ, ಮಹಾ ಪ್ರಬಂಧಗಳನ್ನು ಮತ್ತು ನಿಗದಿತ ಯೋಜನೆಗಾಗಿ ಅನುದಾನ ಪಡೆದು ಸಿದ್ಧಪಡಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ.
ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕೃತಿಯ ಮೂರು ಪ್ರತಿಗಳನ್ನು ಕೊನೆಯಲ್ಲಿ ನೀಡಿರುವ ವಿಳಾಸಕ್ಕೆ ಏಪ್ರಿಲ್ 15 ರ ಒಳಗೆ ಕಳುಹಿಸಿ ಕೊಡಲು ಕೋರಿದೆ . ‘ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಯು 25,000 ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು 2023ರ ಜೂನ್ 1ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು.
ಕೃತಿಗಳನ್ನು ಕಳುಹಿಸಬೇಕಿರುವ ವಿಳಾಸ:
ವಿಜಯಾ ರಾವ್,ಮನೆ ನಂಬರ್ 861, 14ನೇ ಮೇನ್, ವಿಜಯನಗರ ಮೊದಲನೆ ಹಂತ, ಮೈಸೂರು. ಪಿನ್: 570017. ಮೊಬೈಲ್: 9845422855
Key words: Invitation – Works – Vijaya Dabbe Literary Award-mysore