ಬೆಂಗಳೂರು, ಏಪ್ರಿಲ್ 17, 2021 (www.justkannada.in): ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಎರಡು ಪಂದ್ಯಗಳನ್ನು ಗೆದ್ದು 4 ಅಂಕ ಸಂಪಾದಿಸಿರುವ ಆರ್ ಸಿಬಿ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ. ಹೀಗಾಗಿ ಮುಂದಿನ ಪಂದ್ಯಗಳ ಮೇಲೆ ಉತ್ತಮ ಆಟವಾಡಿ ಅಗ್ರ ಸ್ಥಾನ ಕಾಯ್ದುಕೊಳ್ಳಬೇಕಿದೆ.
ಈ ಬಾರಿ ಆರಂಭಿಕ ಜಯ ದಾರಿಯಲ್ಲಿ ಮುಂದುವರಿದರೆ ಕೊನೆಯ ಹಂತದವರೆಗೂ ಅಗ್ರಸ್ಥಾನಿಯಾಗಿ ಕಪ್ ಗೆಲುವು ಸರಳವಾಗಲಿದೆ.
ಕಳೆದ ಬಾರಿಯೂ ಆರ್ ಸಿಬಿ ಆರಂಬಿಕ ಹಂತದಲ್ಲಿ ಅಗ್ರ ಮೂರರೊಳಗೇ ಸ್ಥಾನ ಹೊಂದಿತ್ತು. ನಂತರ ಸತತ ಸೋಲಿನಿಂದ ಕಂಗೆಟ್ಟಿತ್ತು.
