ಬೆಂಗಳೂರು, ಡಿಸೆಂಬರ್ 31, 2019 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-13 ವೇಳಾಪಟ್ಟಿ ಪ್ರಕಟಗೊಂಡಿದೆ.
2020, ಮಾರ್ಚ್ 29ರಂದು ಮುಂಬೈನಲ್ಲಿ ಮಿಲಿಯನ್ ಡಾಲಿರ್ ಟೂರ್ನಿಗೆ, ಚಾಲನೆ ದೊರೆಯಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಹೋಂ ಗ್ರೌಂಡ್ ವಾಂಖೆಡೆ ಮೈದಾನದಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯವನ್ನಾಡಲಿದೆ.
ಈ ಬಾರಿ ಹೆಚ್ಚು ಡಬಲ್ ಹೆಡ್ಡರ್ ಪಂದ್ಯಗಳನ್ನ ಆಡಿಸಲು, ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಚಿಂತನೆ ನಡೆಸುತ್ತಿದೆ. ಹೀಗಾಗಿ ಈ ಬಾರಿ ಕ್ರಿಕೆಟ್ ಅಭಿಮಾನಿಗಳಿಗೆ, ಡಬಲ್ ಕಿಕ್ ಸಿಗೋದು ಗ್ಯಾರೆಂಟಿಯಾಗಿದೆ.