ಬೆಂಗಳೂರು, ಮೇ 25, 2022 (www.justkannada.in): ಐಪಿಎಲ್ನಲ್ಲಿ ಇಂದು ಆರ್’ಸಿಬಿ ಪಾಲಿಗೆ ಪ್ರಮುಖ ಪಂದ್ಯ ನಡೆಯಲಿದೆ.
ಇದು ನಾಕಾಟ್ ಮ್ಯಾಚ್. ಇಲ್ಲಿ ಗೆದ್ದವರು ಫೈನಲ್ ಸ್ಥಾನಕ್ಕಾಗಿ ಕ್ವಾಲಿಫೈಯರ್ 2ರಲ್ಲಿ ಆಡಲಿದ್ದಾರೆ. ಸೋತವರು ಪ್ಯಾಕಪ್ ಮಾಡಿ ಮನೆಗೆ ತೆರಳಿದ್ದಾರೆ!
ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ಕುತೂಹಲದ ಕೇಂದ್ರಬಿಂದುವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದೃಷ್ಟದ ಮೇಲೆ ಪ್ಲೇ-ಆಫ್ ಪ್ರವೇಶಿಸಿದೆ. ಹೀಗಾಗಿ ಎರಡು ತಂಡಗಳ ನಡುವೆ ಹೆಚ್ಚು ಅಂತರವಿಲ್ಲ. ಲಖನೌ ಸೂಪರ್ ಜೈಂಟ್ಸ್ ಟೂರ್ನಿಯ ಆರಂಭದಲ್ಲಿ ತೋರಿದ ಸ್ಥಿರತೆಯನ್ನು 2ನೇ ಭಾಗದಲ್ಲಿ ತೋರಿಸಿಲ್ಲ.ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಬಲಿಷ್ಠವಾಗಿದೆ. ಕೆ.ಎಲ್. ರಾಹುಲ್ ಮತ್ತು ಕ್ವಿಂಟಾನ್ ಡಿಕಾಕ್ ಆರ್ ಸಿಬಿ ಕಾಡುವ ಸಾಧ್ಯತೆ ಇದೆ. ಇನ್ನು ರಾಯಲ್ ಚಾಲೆಂಜರ್ಸ್ ತಂಡದ ಕಾಂಬಿನೇಷನ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.