ಮೈಸೂರು ಪೊಲೀಸ್ ಆಯುಕ್ತರಾಗಿ ಸೀಮಾ ಲಟ್ಕರ್, ಎಸ್ ಪಿ ಆಗಿ ಎನ್. ವಿಷ್ಣುವರ್ದನ ನೇಮಕ

ಮೈಸೂರು,ಜುಲೈ,3,2024 (www.justkannada.in): ರಾಜ್ಯ ಸರಕಾರ  ಹಲವು ಐಪಿಎಸ್ ಅಧಿಕಾರಿಗಳನ್ನು  ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಸೀಮಾಲಟ್ಕರ್ ಹಾಗೂ ಮೈಸೂರು ಎಸ್ಪಿ ಆಗಿ ಎನ್. ವಿಷ್ಣುವರ್ದನ ಅವರನ್ನ ನೇಮಕ ಮಾಡಲಾಗಿದೆ. ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿದ್ದ ಸೀಮಾ ಲಟ್ಕರ್, ಇದೀಗ ರಮೇಶ್ ಬಾನೋತ್ ಅವರ ವರ್ಗಾವಣೆಯಿಂದ ಖಾಲಿಯಾದ ಜಾಗಕ್ಕೆ ನೇಮಿಸಿ ಆದೇಶ ಹೊರಡಿಸಲಾಗಿದೆ.

ಸರಕಾರದ ಆದೇಶದ ಪ್ರಕಾರ, ಯತೀಶ್ ಎನ್. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ನೇಮಿಸಲಾಗಿದೆ. ಸಿ.ಬಿ.ರಿಷ್ಯಂತ್ ಅವರನ್ನು ಬೆಂಗಳೂರಿನ ವೈರ್‌ಲೆಸ್ ಎಸ್ ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಲಾಭು ರಾಮ್ ಅವರನ್ನು ಬೆಂಗಳೂರಿನ ಕೇಂದ್ರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ. ಡಾ.ಬಿ.ಆರ್. ರವಿಕಾಂತೇಗೌಡ ಅವರನ್ನು Inspector General of Police, Headquarters-1ಗೆ ವರ್ಗಾವಣೆ ಮಾಡಲಾಗಿದೆ.

ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿದ್ದ ಡಾ.ಕೆ.ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರೀಕ್ಷಕರಾಗಿ ನಿಯೋಜನೆ ಮಾಡಲಾಗಿದೆ.

ಬೆಂಗಳೂರು ನಗರ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿ.ಕೆ.ಬಾಬಾ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಕೆಳಕಂಡ ಐಪಿಎಸ್ ಅಧಿಕಾರಿಗಳನ್ನ ವರ್ಗವಾಣೆ ಮಾಡಲಾಗಿದೆ.

ಬಿ ರಮೇಶ್ : ಡಿಐಜಿ ಪೂರ್ವವಲಯ, ದಾವಣಗೆರೆ..

ಸುಮನ್ ಡಿ ಪೆನ್ನೆಕರ್ : ಎಸ್ ಪಿ , ಬಿಎಂಟಿಎಫ್..

ಸಿ ಬಿ ರಿಷ್ಯಂತ್: ಎಸ್ ಪಿ ವೈರ್ಲೆಸ್ .

ಚನ್ನಬಸವಣ್ಣ : ಐಜಿಪಿ,(ಆಡಳಿತ ) ಡಿಜಿ ಕಛೇರಿ.

ನಾರಾಯಣ್ ಎಂ, : ಎಸ್ ಪಿ ಉತ್ತರ ಕನ್ನಡ..

ಸಾರ ಫಾತಿಮಾ: ಡಿಸಿಪಿ ಆಗ್ನೇಯ ವಿಭಾಗ , ಬೆಂಗಳೂರು ನಗರ

ಅರುಣಾಂಗ್ಷು ಗಿರಿ : SP ,CID

ನಾಗೇಶ್ ಡಿ ಎಲ್ : ಡಿಸಿಪಿ , ಸಿ ಎ ಆರ್ ಹೆಡ್ ಕ್ವಾರ್ಟರ್ಸ್. ಬೆಂಗಳೂರು ನಗರ.

ಪದ್ಮಿನಿ ಸಾಹೋ :ಡಿಸಿಪಿ ಆಡಳಿತ , ಬೆಂಗಳೂರು ನಗರ..

ಪ್ರದೀಪ್ ಗುಂಟಿ: ಎಸ್ ಪಿ ಬೀದರ್ ಜಿಲ್ಲೆ..

ಯತೀಶ್ ಎನ್ : ಎಸ್ ಪಿ ದಕ್ಷಿಣ ಕನ್ನಡ ಜಿಲ್ಲೆ..

ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಮಂಡ್ಯ ಜಿಲ್ಲೆ.

Key words: IPS, Officer , Transfer, Seema Latkar,Mysore, Police Commissioner