ಬೆಂಗಳೂರು,ಫೆಬ್ರವರಿ,20,2023(www.justkannada.in): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರ ನಡುವಿನ ಕಿತ್ತಾಟ ವಿಚಾರ ರಾಜ್ಯಮುಖ್ಯಕಾರ್ಯದರ್ಶಿಗಳ ಅಂಗಳಕ್ಕೆ ತಲುಪಿದ್ದು, ಈಗಾಗಲೇ ಇಬ್ಬರು ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಹಾಗೂ ಮಾಧ್ಯಮಗಳ ಮುಂದೆ ಹೋಗದಂತೆ ಸಿಎಸ್ ವಂದಿತಾ ಶರ್ಮಾ ಸೂಚಿಸಿದ್ದಾರೆ.
ಈ ಮಧ್ಯೆ ಕಳೆದ ಎರಡು ದಿನಗಳಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಮುಗಿ ಬೀಳುತ್ತಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗೀಲ್ ಅವರು ಮೇಲಿಂದ ಮೇಲೆ ರೋಹಿಣಿ ಸಿಂಧೂರಿ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ಗಳನ್ನು ಮಾಡುತ್ತಲೇ ಇದ್ದರು.
ರೋಹಿಣಿ ಸಿಂಧೂರಿ ಅವರ ವಿರುದ್ಧ ರೂಪಾ ಮೌದ್ಗಿಲ್ ಅವರು ಕಳೆದ ಎರಡು ದಿನಗಳಿಂದ ಸುಮಾರು 12 ಪೋಸ್ಟ್ ಗಳನ್ನ ಮಾಡಿ ಆರೋಪಗಳ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ . ಇವರು ಮಾಡಿರುವ ಪೋಸ್ಟ್ ಗಳು ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, ನೆಟ್ಟಿಗರು ಸುಮಾರು 2115 ಕಾಮೆಂಟ್ಸ್ ಗಳನ್ನ ಮಾಡಿದ್ದಾರೆ. ಕಮೆಂಟ್ ಮೂಲಕ ಹಲವರು ರೂಪಾ ಮೌದ್ಗಿಲ್ ಅವರ ಪರ ನಿಂತರೇ ಇನ್ನು ಹಲವರು ರೋಹಿಣಿ ಸಿಂದೂರಿ ಅವರ ಪರ ನಿಂತಿದ್ದಾರೆ. ಹಾಗೆಯೇ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾಡಿರುವ 12 ಪೋಸ್ಟ್ ಗಳಿಗೆ ಸುಮಾರು 16.9k ಲೈಕ್ಸ್ ಗಳು ಬಂದಿದೆ.
ಒಟ್ಟಾರೇ ಕಳೆದ ಎರಡು ದಿನಗಳಿಂದ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿದ್ದ ವಾರ್ ಗೆ ಇಂದು ಸಿಎಸ್ ವಂದಿತಾ ಶರ್ಮಾ ಅವರು ತಾಕೀತು ಮಾಡುವ ಮೂಲಕ ಬ್ರೇಕ್ ಹಾಕಿದ್ದಾರೆ.
key words: IPS-Rupa mudgil-IAS-Rohini sinduri-war