ಬೆಂಗಳೂರು, ಫೆಬ್ರವರಿ 28, 2021 (www.justkannada.in): ‘ಇಸ್ರೋʼದಿಂದ ಬ್ರೇಜಿಲ್ʼನ ಚೊಚ್ಚಲ ಉಪಗ್ರಹ ʼPSLV-C51ʼ ಉಡಾವಣೆ ಮಾಡಲಾಗಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದುಹೊಸ ದಾಖಲೆಯನ್ನ ನಿರ್ಮಿಸಿದೆ.
ಇಸ್ರೊ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಈ ವರ್ಷದ ಮೊದಲ ರಾಕೆಟ್ʼನ್ನ ಬಾಹ್ಯಾಕಾಶಕ್ಕೆ ಕಳುಹಿಸಿದೆ.
ಫೆಬ್ರವರಿ 28 ರಂದು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್ಡಿಎಸ್ಸಿ) ಶಾರ್ʼನಿಂದ ರಾಕೆಟ್ ಉಡಾವಣೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ, ಬ್ರೆಜಿಲ್ನ ಮುಖ್ಯ ಉಪಗ್ರಹ ಅಮೆಜೋನಿಯಾವನ್ನ ಹೊರತುಪಡಿಸಿ, ಇತರ 18 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.