ಬೆಂಗಳೂರು:ಜೂ-12:(www.justkannada.in) ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ಯೋಜನೆಯ ಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಬೆಂಗಳೂರು ಕೇಂದ್ರ ಬಿಡುಗಡೆ ಮಾಡಿದೆ.
ಜುಲೈ 9 ರಿಂದ ಜುಲೈ 16 ರ ನಡುವೆ ಚಂದ್ರಯಾನ 2 ಉಡ್ಡಯನಕ್ಕೆ ಆಂಧ್ರದ ಶ್ರೀ ಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಈಗಾಗಲೇ ಸಿದ್ಧತೆ ಭರದಿಂದ ಸಾಗಿದೆ. ಈ ಹಿನ್ನಲೆಯಲ್ಲಿ ಇಸ್ರೋ ಚಂದ್ರಯಾನ-2 ಯೋಜನೆಯ ಮೊದಲ ಚಿತ್ರ ಬಿಡುಗಡೆ ಮಾಡಿದೆ.
10 ವರ್ಷಗಳ ನಂತರ ಭಾರತ ಚಂದ್ರಯಾನ-2 ಯೋಜನೆಯನ್ನು ಕೈಗೆತ್ತಿಕೊಂಡಿದೆ. 2009ರಲ್ಲಿ ಇಸ್ರೋ ಚಂದ್ರಯಾನ 1 ಯೋಜನೆ ಕೈಗೊಂಡಿತ್ತು. ಆದರೆ ರೋವರ್ಅನ್ನು ಈ ಯೋಜನೆಯಲ್ಲಿ ಸೇರಿಸಿರಲಿಲ್ಲ. ಆರ್ಬಿಟರ್ ಮತ್ತು ಇಂಪ್ಯಾಕ್ಟರ್ ಗಳು ಚಂದ್ರಯಾನ 1ರ ಭಾಗವಾಗಿದ್ದವು. ಇಂಪ್ಯಾಕ್ಟರ್ ಚಂದ್ರನ ಮೇಲ್ಮೈನ ದಕ್ಷಿಣ ಭಾಗದಲ್ಲಿ ಪತನವಾಗಿತ್ತು.
ಚಂದ್ರಯಾನ 2 ಯೋಜನೆಯು ದೇಶೀಯ ನಿರ್ಮಿತ ಜಿಎಸ್ಎಲ್ವಿ ಎಂಕೆ3 ನೌಕೆ ಮೂಲಕ ಮೂರು ಮೊಡ್ಯುಲ್ಗಳನ್ನು ಸಾಗಿಸಲಿದೆ. ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ – ಈ ಮೂರು ಮೊಡ್ಯುಲ್ಗಳನ್ನು ಜಿಎಸ್ಎಲ್ವಿ ಎಂಕೆ3 ಚಂದ್ರನಲ್ಲಿಗೆ ಹೊತ್ತೊಯ್ಯಲಿದೆ. ಲ್ಯಾಂಡರ್ಗೆ ವಿಕ್ರಮ್ ಎಂದು ಹೆಸರಿಡಲಾಗಿದ್ದು, ರೋವರ್ಗೆ ಪ್ರಾಗ್ಯನ್ ಎಂದು ಹೆಸರಿಡಲಾಗಿದೆ. ಚಂದ್ರ ಗ್ರಹದ ಮೇಲೆ ಲ್ಯಾಂಡರ್ ಇಳಿಯಲಿದೆ.
ಚಂದ್ರಯಾನ-2 ಯೋಜನೆಯ ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ
ISRO releases first pictures of Chandrayaan-2 at Bengaluru Satellite
The Indian Space Research Organisation (ISRO) is gearing up to launch India’s second lunar mission Chandrayaan-2 as per schedule in July. The ISRO on Wednesday shared the first pictures of Chandrayaan-2 the lander and orbiter at its Satellite Integration and Testing establishment in Bengaluru.