ಬೆಂಗಳೂರು, ಆಗಸ್ಟ್ 07, 2022 (www.justkannada.in): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿಗೆ ಅತೀ ಚಿಕ್ಕ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಂದು ಬೆಳಗ್ಗೆ 9:18ರ ಸುಮಾರಿಗೆ ಎಸ್‌ಎಸ್‌ಎಲ್‌ವಿ-ಡಿ1 (SSLV-D1) ಭೂ ವೀಕ್ಷಣಾ ಉಪಗ್ರಹ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವನ್ನು ಹೊತ್ತೊಯ್ಯುವ ತನ್ನ ಚಿಕ್ಕ ರಾಕೆಟ್ ಯಶಸ್ವಿ ಉಡಾವಣೆ ನಡೆದಿದೆ.
ಇದೇ ಮೊದಲ ಬಾರಿಗೆ ಇಸ್ರೋ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ಎಲ್‌ವಿ) ವನ್ನು ಉಡಾವಣೆ ಮಾಡಿದೆ. ಇದನ್ನು ಭೂಮಿಯ ಕಡಿಮೆ ಕಕ್ಷೆಯಲ್ಲಿ ಉಪಗ್ರಹಗಳ ನಿಯೋಜನೆಗೆ ಬಳಸಲಾಗುತ್ತದೆ.
75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಅಂಗವಾಗಿ ನಿರ್ಮಿಸಿದ ಈ ಉಪಗ್ರಹವನ್ನು 75 ಶಾಲೆಗಳ 750 ವಿದ್ಯಾರ್ಥಿಗಳು ರೂಪಿಸಿದ್ದಾರೆ. ಇದಕ್ಕೆ ಆಜಾದಿ ಸ್ಯಾಟ್ ಎಂದು ಹೆಸರಿಸಲಾಗಿದೆ.