ಬಿಎಸ್ ವೈ ಆಪ್ತನ ಮನೆ ಮೇಲೆ ಐಟಿ ದಾಳಿ ವಿಚಾರ: ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ..?

ಬಾಗಲಕೋಟೆ,ಅಕ್ಟೋಬರ್,8,2021(www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್ ಈಶ್ವರಪ್ಪ, ತಪ್ಪು ಯಾರೇ ಮಾಡಿದ್ರೂ ತಪ್ಪೆ. ತಪ್ಪು ಮಾಡಿದ್ದರೇ ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲ ಅಂದ್ರೆ ಹೊರ ಬರುತ್ತಾರೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಎಸ್ ವೈ ಅವರೇ ನನ್ನ ಆಪ್ತ ಎಂದಿದ್ದಾರೆ. ದಾಳಿ ಆಗಿದೆ ಅಂದ್ರೆ ತಪ್ಪು ಮಾಡಿದ್ದಾರೆ ಅಂತಾ ಅಲ್ಲ. ಬಿಎಸ್ ವೈ ಬಗ್ಗೆ ಅನುಮಾನ ಪಡೋದು ಸರಿಯಲ್ಲ ಎಂದರು.

ಕಾಂಗ್ರೆಸ್  ನಾಯಕರನ್ನ ಮಾತ್ರ ಮಾತ್ರ ಗುರಿಯಾಗಿಸಿ ಐಟಿ ದಾಳಿ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಮೇಲಷ್ಟೇ ಐಟಿ ದಾಳಿ ಮಾಡ್ತಾರೆ ಎಂದಿದ್ರು. ಈಗ್ಯಾಗೆ ಮಾತನಾಡುತ್ತಿಲ್ಲ. ಯಾರೇ ಆದ್ರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಥಾರೆ ಇಲ್ಲಾಂದ್ರೆ ಇಲ್ಲ. ಯಾರ ಮೇಲೆ ಅನುಮಾನ ಬರುತ್ತೋ ಅವರ ಮೇಲೆ ದಾಳಿ ಮಾಡುತ್ತಾರೆ. ಇದಕ್ಕೆ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ದಾಳಿ ಎನ್ನೋದು ಸರಿಯಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Key words: IT attack – BSY’s- PA- Minister- KS Eshwarappa

ENGLISH SUMMARY…

IT raid on BSY’s aide: Minister K.S. Eshwarappa’s response
Bagalkot, October 8, 2021 (www.justkannada.in): In his response to the IT raid on one of the aides of former Chief Minister B.S. Yeddyurappa, the Rural Development, and Panchayat Raj Minister K.S. Eshwarappa today expressed his view that whoever has committed a mistake shall face punishment. If they have not done anything wrong, they will come out clean.
Speaking to the presspersons in Bagalkot today, he said, “BSY himself has agreed that the person whose house has been raided is one of his close aides. A raid doesn’t confirm that he has committed a mistake. It is wrong to suspect BSY.”
In his reply to a question by the scribes about the earlier allegations that the Govt. of India is targeting only Congress party leaders, Eshwarappa said, “Yes the Congress leaders always used to blame that only their party leaders are being targeted. Why are they keeping quiet now? It proves that the Govt. of India or ED is not biased. They will raid whomever they suspect. The Congress leaders should apologize to the people of the state for their earlier allegations.”
Keywords: Minister K.S. Eshwarappa/ former CM BSY/ aide/ IT raid