ಬೆಳಗಾವಿ,ಡಿಸೆಂಬರ್,11,2023(www.justkannada.in): ಸ್ಪೀಕರ್ ಹುದ್ದೆ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದು ಜಮೀರ್ ರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಹೇಳಿಕೆ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಜಮೀರ್ ಅಹ್ಮದ್ ವಿಷಯದಲ್ಲಿ ಸಭಾಧ್ಯಕ್ಷರು ಜಮೀರ್ ಆಡಿದ ಮಾತು ತಪ್ಪು ಅಂತ ಹೇಳಿ ಅವರನ್ನು ಉಚ್ಚಾಟಿಸದಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಕಿಡಿಕಾರಿದರು.
ಬರ ಮತ್ತು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕಿರುವ ಅರಿವು ತಮಗಿದೆ, ಅದರೆ ಅದಕ್ಕೂ ಮೊದಲು ಸಭಾಧ್ಯಕ್ಷನ ಪೀಠದ ಪಾವಿತ್ರ್ಯತೆಯನ್ನು ಒಂದು ಕೋಮಿಗೆ ಹೋಲಿಸಿ ಅಪಮಾನ ಮಾಡಿರುವ ಜಮೀರ್ ಅಹ್ಮದ್ ಅವರನ್ನು ಉಚ್ಚಾಟನೆ ಮಾಡಬೇಕು ಆಗ್ರಹಿಸಿದರು.
ಸ್ಪೀಕರ್ ಹುದ್ದೆ ಜಾತಿ ಆಧಾರಿತ ಆಗಿರಲ್ಲ, ಅವರು ಎಲ್ಲ 224 ಶಾಸಕರಿಗೆ ಸಭಾಧ್ಯಕ್ಷರಾಗಿರುತ್ತಾರೆ ಆದರೆ, ಕೇವಲ ಮುಸಲ್ಮಾನರನ್ನು ಓಲೈಸಲು ಜಮೀರ್ ಪೀಠಕ್ಕಿರುವ ಗೌರವವನ್ನು ಹಾಳು ಮಾಡಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
Key words: It is- really- unfortunate – Zameer – not expelled – MLA -Yatnal