ಬೆಂಗಳೂರು,ಅಕ್ಟೋಬರ್,13,2023(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಬೇಟೆ ಮುಂದುವರೆದಿದ್ದು, ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಬಾಮೈದ ಪ್ರದೀಪ್ ಮನೆ ದಾಳಿ ನಡೆಸಿದ್ದಾರೆ.
ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರ ಪ್ರದೀಪ್ ಗೆ ಸೇರಿದ ಫ್ಲ್ಯಾಟ್ನ ಬೆಡ್ ರೂಮ್ನಲ್ಲಿ 23 ಬಾಕ್ಸ್ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಪ್ರದೀಪ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಶ್ವತ್ಥಮ್ಮ ಪತಿ ಅಂಬಿಕಾಪತಿಗೆ ಸೇರಿದ ಕಚೇರಿಗಳಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಶ್ವತ್ಥಮ್ಮ, ಪತಿ ಅಂಬಿಕಾಪತಿ, ಪ್ರದೀಪ್ ಮೂವರ ಬ್ಯಾಂಕ್ ಖಾತೆಗಳನ ಲಾಕರ್ ಪರಿಶೀಲಿಸುತ್ತಿದ್ದಾರೆ. ಪತ್ತೆಯಾದ ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Key words: IT raid – former corporator- house- More than- Rs 40 crore- found