ಮುಂಬೈ, ಫೆಬ್ರವರಿ 04, 2020 (www.justkannada.in): ಬಾಲಿವುಡ್ ನಟ ಶಾರುಖ್ ಖಾನ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಶಾರುಖ್ ಒಡೆತನದ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರೋಸ್ ವ್ಯಾಲಿ ಗ್ರೂಪ್ಗೆ ಸೇರಿದ 70.11 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.
ಪಶ್ಚಿಮ ಬಂಗಾಳ, ಮುಂಬೈ ಸೇರಿ ವಿವಿಧ ಭಾಗದಲ್ಲಿರುವ ಜಮೀನನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ 16.20 ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್ ಅನ್ನು ಸೀಜ್ ಮಾಡಲಾಗಿದೆ.
ಇದರಲ್ಲಿ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಸಂಬಂಧಿಸಿದ ಆಸ್ತಿ ಕೂಡ ಇದೆ ಎನ್ನಲಾಗಿದೆ. ಶಾರುಖ್ ಪತ್ನಿ ಕೋಲ್ಕತ್ತಾ ನೈಟ್ ರೈಡರ್ಸ್ ನಿರ್ದೇಶಕಿ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದೇ ಕ್ಷಣದಲ್ಲೂ ಇಡಿ ಅವರನ್ನು ಕರೆಸಿ ವಿಚಾರಣೆ ನಡೆಸಬಹುದು.