ಬೆಂಗಳೂರು,ಫೆಬ್ರವರಿ,17,2021(www.justkannada.in): ಪ್ರತಿಷ್ಟಿತ ಮೆಡಿಕಲ್ ಕಾಲೇಜು ಮಾಲೀಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರು ,ಮಂಗಳೂರು ಸೇರಿ ಹಲವೆಡೆ ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನ ಎಜೆ ಶೆಟ್ಟಿ ಆಸ್ಪತ್ರೆ ಹಾಗೂ ಯೆನಪೋಯಾ ಆಸ್ಪತ್ರೆಯ ಮಾಲೀಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ನಗರದ ಬೆಂದೂರು ವೆಲ್ ನಲ್ಲಿರುವ ಎ.ಜೆ.ಆಸ್ಪತ್ರೆಯ ಮಾಲೀಕ ಎ.ಜೆ.ಶೆಟ್ಟಿ ಅವರ ಮನೆ ಹಾಗೂ ಯೆನಪೋಯಾ ಆಸ್ಪತ್ರೆಯ ಮಾಲೀಕ ವೈ.ಅಬ್ದುಲ್ಲಾ ಅವರ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ದೇವನಹಳ್ಳಿ ಬಳಿ ಇರುವ ಆಕಾಶ್ ಮೆಡಿಕಲ್ ಕಾಲೇಜು, ಬೆಂಗಳೂರು ಹೊರವಲಯದ ಕುಂಬಳಗೋಡು ಸಮೀಪವಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯಾಗಿದೆ. ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಮೂರು ಕಾರಿನಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರು ಶಿರಾ ಗೇಟ್ ಬಳಿ ಇರುವ ಸಪ್ತಗಿರಿ ಮೆಡಿಕಲ್ ಕಾಲೇಜು ಮೇಲೆ ಐಟಿ ದಾಳಿಯಾಗಿದ್ದು, 7 ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಇನ್ನು ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೇಲೂ ಐಟಿ ದಾಳಿಯಾಗಿದೆ. ಕಣಚೂರು ಮೋನು ಮನೆಯಲ್ಲಿ ಐಟಿ ಅಧಿಕಾರಿಗಳು ದಾಖಲೆ ಪರಿಶಿಲನೆ ನಡೆಸುತ್ತಿದ್ದಾರೆ.
ENGLISH SUMMARY…
IT shock for prestigious Medical College owners: Raids at several places, verification of documents
Bengaluru, Feb. 17, 2021 (www.justkannada.in): Income Tax officers gave a shock to the owners of several prestigious medical college owners today by conducting raids simultaneously at several places including Bengaluru, Mangaluru. The process of verifying documents is still in progress.
Raids were conducted on the houses of AJ Shetty Hospital and Yenepoya Hospital in Mangaluru and the IT officials are verifying the documents. The team led by officer Y. Abdullah raided the house of A.J. Shetty, owner of AJ Hospital, in Benduruwel in Mangaluru City today early morning.
Raids are also made on the Akash Medical College located in Devanahalli, Bengaluru, and BGS Educational Institutions located near Kumbalagodu, on the outskirts of Bengaluru City. A team of more than 10 IT officials arrived at the BGS Educational Institution in three cars and are verifying the documents.
Likewise, raids are also conducted at the Sapthagiri Medical College near Sira gate in Tumakuru, where 7 IT officials are verifying the documents. The other colleges which have been raided by IT officials include Kanachuru Medical College in Deralakatte. The IT officials are verifying documents at the Kanachuru Monu’s house.
Keywords: IT shock for Medical College owners/ IT raids/ Mangaluru/ Bengaluru
Key words: IT- Shock – Reputed- Medical College- Owners-Mangalore.