ಮೈಸೂರು,ಅಕ್ಟೋಬರ್,24,2020(www.justkannada.in) : ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಜಂಬೂಸವಾರಿಗೆ ತಾಂತ್ರಿಕ ಸಲಹಾ ಸಮಿತಿಯಂತೆ ಕೇವಲ 300 ಜನರಿಗೆ ಮಾತ್ರ ಅವಕಾಶ ನೀಡಬೇಕಿದ್ದು, ತಾಂತ್ರಿಕ ಸಮಿತಿಯ ನಿರ್ದೇಶನವನ್ಮು ಪಾಲಿಸುವುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಯಾರನ್ನು ಬಿಡಬೇಕು..? ಯಾರನ್ನು ಬಿಡಬಾರದು..? ಅನ್ನುವುದೇ ಸವಾಲು
ಜಿಲ್ಲಾಡಳಿತವು ಗಣ್ಯರು, ಜನಪ್ರತಿನಿಧಿಗಳು ಅಧಿಕಾರಿಗಳು, ಪೋಲೀಸರು, ಮಾದ್ಯಮದವರು ಸೇರಿದಂತೆ ಕೇವಲ 300 ಜನರಿಗೆ ಅವಕಾಶ ಕಲ್ಪಿಸಬೇಕಿದೆ. ಅರಮನೆ ಆವರಣದೊಳಗೆ ಯಾರನ್ನು ಬಿಡಬೇಕು..? ಯಾರನ್ನು ಬಿಡಬಾರದು..? ಅನ್ನುವುದೇ ಸವಾಲಿನ ಕೆಲಸವಾಗಿದೆ.
ಐದು ಜಾನಪದ ಕಲಾತಂಡಗಳಿಂದ ತಾಲೀಮು
ಜಂಬೂ ಸವಾರಿಯಲ್ಲಿ ಭಾಗಿಯಾಗಲು ಐದು ಜಾನಪದ ಕಲಾತಂಡಗಳಿಂದ ತಾಲೀಮು ನಡೆಸುತ್ತಿವೆ. ಒಂದು ಜಾನಪದ ಕಲಾತಂಡಗಳಲ್ಲಿ ಕನಿಷ್ಟ ಎಂಟರಿಂದ ಹತ್ತರವರೆಗೆ ಕಲಾವಿದರಿದ್ದು, ಜಾನಪದ ಕಲಾವಿದರುಗಳ ಸಂಖ್ಯೆಯೇ 50 ಕ್ಕೂ ಮೀರುವ ಸಾಧ್ಯತೆಯಿದೆ. ಇನ್ನು ಪೊಲೀಸರ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ಜಂಬೂಸವಾರಿ ನಡೆಸುತ್ತಾ ಜಿಲ್ಲಾಡಳಿತ ಎಂದು ಕಾದು ನೋಡಬೇಕಿದೆ.
key words : Jambosavari-Direction-Technical-Committee-What-policy-District …?