ಮೈಸೂರು,ಸೆಪ್ಟೆಂಬರ್,13,2020(www.justkannada.in) : ನಾಡಹಬ್ಬ ದಸರಾವು ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಬಾರದು. ಬನ್ನಿಮಂಟಪದವರೆಗೂ ಜಂಬೂಸವಾರಿ ಸಾಗಬೇಕು. ಹೀಗಾಗದಿದ್ದರೆ, ನಾನೆ ಜಟಕಾ ಗಾಡಿಯಲ್ಲಿ ಚಾಮುಂಡೇಶ್ವರಿ ಕೂರಿಸಿ ಮೆರವಣಿ ಮಾಡುತ್ತೇನೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.
ಮೈಸೂರಿನ ಜಯಚಾಮರಾಜ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅರಮನೆ ಅಂಗಳದಲ್ಲಿ ಮಾತ್ರ ಜಂಬೂ ಸವಾರಿ ಆಚರಣೆ ವಿಚಾರ. ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ದಸರಾ ನಾಡಹಬ್ಬ,ಅದ್ದೂರಿಯಾಗಿಯೇ ಮಾಡಿ. ಕೋರೋನಾ ಸಂದರ್ಭದಲ್ಲಿ ಬಹಳ ವ್ಯವಸ್ಥಿತವಾಗಿ ಸರ್ಕಾರ ಮಾಡಬಹುದು. ಆದರೆ, ಸರ್ಕಾರಕ್ಕೆ ಇದು ಇಷ್ಟವಿಲ್ಲ. ಒಂದು ಕಡೆ ಸರಳ ದಸರಾ ಆದ್ರೆ 15 ಕೋಟಿ ಏಕೆ ಬೇಕಿತ್ತು. ಐದಿನೈದು ಕೋಟಿರೂ ಖರ್ಚು ಮಾಡಿ ದಸರಾ ಮಾಡ್ತಿದ್ದಾರೆ .ಇದರ ಉದ್ದೇಶವೇ ಬೇರೆ ಇದೆ. ಸ್ಥಳಿಯಾ ಕಲಾವಿದರಿಗೆ ಅವಕಾಶ ನೀಡಬೇಕು. ಅಂತರಾಷ್ಟ್ರೀಯ ಕಲಾವಿದರು ಏಕೆ ಬೇಕು ಎಂದು ಪ್ರಶ್ನಿಸಿದರು.
ಕೊರೋನಾ ಬಗ್ಗೆ ಏನ್ ಮಾಡಿದ್ದೀರಾ ಶ್ವೇತ ಪತ್ರ ಹೊರಡಿಸಿ?
ಕೊರೋನಾ ಬಗ್ಗೆ ಸರ್ಕಾರ ಸರಿಯಾದ ಕ್ರಮ ವಹಿಸಿಲ್ಲ. ಕೊರೋನಾ ಬಗ್ಗೆ ಏನ್ ಮಾಡಿದ್ದೀರಾ ಶ್ವೇತ ಪತ್ರ ಹೊರಡಿಸಿ.ಕರ್ನಾಟಕ ಸಾವಿನ ಮನೆ’. ವಿಕ್ಟೋರಿಯಾ ಆಸ್ಪತ್ರೆ ಯಮನ ಅರಮನೆ. ಸರಿಯಾದ ಬೆಡ್ ವ್ಯವಸ್ಥೆ ಇಲ್ಲ. ವೆಂಟಿಲೇಟರ್ ಇಲ.ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸಿಎಂ ಹಾಗೂ ಆರೋಗ್ಯ ಮಂತ್ರಿ ಉತ್ತರ ಕೊಡಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.
7100ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ ಅಂತೀರಾ. ಆಗಿದ್ರೆ ಕೊರೋನಾಗೆ ಬಲಿಯಾದವರಿಗೆ 5ಲಕ್ಷ ಪರಿಹಾರ ಹಣ ಕೊಡಬೇಕು. ನೀವೂ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಗುಡುಗಿದರು.
ಬಿಜೆಪಿ, ಆರ್‌ಎಸ್‌ಎಸ್‌ಗೆ ಹಿಂದಿ ಮೇಲೆ ಪ್ರೀತಿ
ಹಿಂದಿ ಹೇರಿಕೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ಅವರು, ಬಿಜೆಪಿ, ಆರ್‌ಎಸ್‌ಎಸ್‌ಗೆ ಹಿಂದಿ ಮೇಲೆ ಪ್ರೀತಿ ಇದೆ. ಹಿಂದಿ ಹೇರಿಕೆ ಮಾಡಿದ್ರೆ ಕ್ರಾಂತಿ ಆಗಲಿದೆ. ಮೈಸೂರಿನಿಂದಲೇ ಈ ಕ್ರಾಂತಿ ಆರಂಭವಾಗಲಿದೆ. ಕೇಂದ್ರ ಸರ್ಕಾರ ಒತ್ತಾಯವಾಗಿ ಹಿಂದಿ ಹೇರಿಎಕ ಮಾಡ್ತಿದೆ. ಇದು ಸರಿಯಾದ ಕ್ರಮವಲ್ಲ’ ಎಂದರು.
key words : Jambusavari-bunny mantapa-Otherwise-Chamundeswari- parade-Jataka Gaadi-Vatal Nagaraj