ಮೈಸೂರು,ಆ,6,2019(www.justkannada.in): ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ಅನುಚ್ಛೇದ ರದ್ದು ಕೇಂದ್ರ ಸರ್ಕಾರದ ಶ್ಲಾಘನೀಯ ನಡೆ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ವಿಧಿ 370 ಮತ್ತು 35ಎ ರದ್ದತಿ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲಿದೆ. ಇದು ದಶಕಗಳ ಶಾಂತಿಗೆ ಭಂಗ ಉಂಟುಮಾಡಿತ್ತು. ಮುಖ್ಯವಾಗಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕಣಿವೆಯಲ್ಲಿ ಸವಾಲೊಡ್ಡಿತ್ತು. ಕೇಂದ್ರ ಸರ್ಕಾರದ ನಡೆ ಶ್ಲಾಘನೀಯ ಎಂದರು.
ಇನ್ನು ಅಳಿಯನಿಗೆ ಮಂತ್ರಿ ಸ್ಥಾನದ ಒತ್ತಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಹರ್ಷವರ್ದನ್ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಈಗ ಮಂತ್ರಿ ಸ್ಥಾನ ಕೇಳುವ ಸಮಯವಲ್ಲ. ಅವರು ಇನ್ನು ಜನರೊಟ್ಟಿಗೆ ಸಂಪರ್ಕ ಸಾಧಿಸಬೇಕು, ಕ್ಷೇತ್ರದ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಜನರ ಪ್ರೀತಿ ವಿಶ್ವಾಸ ಗಳಿಸಬೇಕು. ಕ್ಷೇತ್ರದ ಅಭಿವೃದ್ಧಿ ಕಡೆ ಮಾತ್ರ ಗಮನ ಕೊಡಬೇಕು ಎಂದು ಸ್ಪಷ್ಟನೆ ನೀಡಿದರು.
Key words: Jammu and Kashmir-article 370-cancel- central government- move is- commendable-MP Srinivas Prasad