“ಜ.26ರಂದು ನಮ್ಮ ತ್ರಿವರ್ಣ ಧ್ವಜಕ್ಕೆ ಅವಮಾನ, ದೇಶದ ಜನರು ತಲೆತಗ್ಗಿಸುವಂತಹ ಕೆಲಸ” : ಪ್ರಧಾನಿ ನರೇಂದ್ರ ಮೋದಿ ಬೇಸರ

ಬೆಂಗಳೂರು,ಜನವರಿ,31,2021(www.justkannada.in) : ಜ.26ರಂದು ನಡೆದ ಗಲಭೆ. ನಮ್ಮ ತ್ರಿವರ್ಣ ಧ್ವಜಕ್ಕೆ ಅವಮಾನವಾಗಿದ್ದು, ಇದು ದೇಶದ ಜನರು ತಲೆತಗ್ಗಿಸುವಂತಹ ಕೆಲಸವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರವ್ಯಕ್ತಪಡಿಸಿದ್ದಾರೆ.jk

2021ನೇ ಮೊದಲ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವದಂದು ಕೆಂಪು ಕೋಟೆ ಮೇಲೆ ತ್ರಿವರ್ಣ ದ್ವಜಕ್ಕ ಅವಮಾನವಾಗಿದೆ ಎಂದಿದ್ದಾರೆ.

 

ಹೊಸ ವರ್ಷ, ಸಂಕ್ರಾಂತಿ ಸೇರಿದಂತೆ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕಪ್ ಗೆದ್ದಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.

 

ಲಸಿಕೆ ಅಭಿಯಾನವು ಹೆಮ್ಮೆಯ ವಿಷಯವಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಮುಂದಿದ್ದೇವೆ. ಸಂಕಷ್ಟದ ಸಂದರ್ಭ ವಿಶ್ವದ ಜೊತೆಗೆ ನಿಂತಿದ್ದೇವೆ. ಲಸಿಕೆ ವಿತರಣೆಯಲ್ಲಿ ಎಲ್ಲರಿಗಿಂತ ಮುಂದಿದ್ದೇವೆ ಎಂದು ಹೇಳಿದರು.Jan.26,tricolor flag,Shame,country,People,Ashamed,Work,Prime Minister,Narendra Modi

ಅತಿ ಹೆಚ್ಚು ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಮ್ಮ ಸಾಧನೆಗೆಗ ಕೆಲ ದೇಶಗಳು ಅಭಿನಂದನೆ ಸಲ್ಲಿಸಿವೆ. ಕೊರೊನಾ ಹೋರಾಟದಲ್ಲಿ ನಾವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ತಿಳಿಸಿದರು.

key words : Jan.26-tricolor flag-Shame-country-People-
Ashamed-Work-Prime Minister-Narendra Modi