ಹಾಸನದಲ್ಲಿ ಇಂದು ಜನಕಲ್ಯಾಣ ಸಮಾವೇಶ: ಇಬ್ಬರು ನಾಯಕರು ಶಕ್ತಿ ಪ್ರದರ್ಶನಕ್ಕೆ ಸಜ್ಜು.

ಹಾಸನ,ಡಿಸೆಂಬರ್,5,2024 (www.justkannada.in): ಸ್ವಾಭಿಮಾನಿ ಒಕ್ಕೂಟ ಹಾಗೂ ಕೆಪಿಸಿಸಿ ಸಂಯುಕ್ತಾಶ್ರಯದಲ್ಲಿ ಹಾಸನದಲ್ಲಿ ಇಂದು ಜನಕಲ್ಯಾಣ ಸಮಾವೇಶ ಆಯೋಜಿಸಿದ್ದು ಇಬ್ಬರು ನಾಯಕರ ಶಕ್ತಿ ಪ್ರದರ್ಶನಕ್ಕೆ ಈ ಸಮಾವೇಶ ವೇದಿಕೆಯಾಗಲಿದೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕರ್ಮಭೂಮಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಸಮಾವೇಶಕ್ಕೆ 3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹಾಸನ, ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಿಂದ ಜನ ಆಗಮಿಸಲಿದ್ದಾರೆ ಎನ್ನಲಾಗಿದೆ.

ಮುಡಾ ಪ್ರಕರಣ ಬಳಿಕ ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದ್ದು ಇತ್ತ ಸಿಎಂ ಖುರ್ಚಿ ಉಳಿಸಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ವಿಪಕ್ಷಗಳು, ವಿರೋಧಿಗಳಿಗೆ ಎಚ್ಚರಿಕೆ ನೀಡಲು ಸ್ವಾಭಿಮಾನಿ ಸಮಾವೇಶಕ್ಕೆ ಸಜ್ಜಾಗಿದ್ದರು. ಸಿದ್ದರಾಮಯ್ಯ ಆಪ್ತ ಸಚಿವ ಹೆಚ್ ಸಿ ಮಹದೇವಪ್ಪ ಸಮಾವೇಶದ ಜವಾಬ್ದಾರಿ ಹೊತ್ತಿದ್ದರು.

ಆದರೆ ಡಿಸಿಎಂ ಡಿಕೆ ಶಿವಕುಮಾರ್ ಸಮಾವೇಶದ ಹೆಸರನ್ನೇ ಬದಲಾಯಿಸುವ ಮೂಲಕ ಸಿಎಂಗೆ ಚೆಕ್ ಮೆಟ್ ಇಟ್ಟರು. ಒಂದು ಸಮಾವೇಶದಲ್ಲಿ ಹಲವು ರಾಜಕೀಯ ಲೆಕ್ಕಾಚಾರವಿದ್ದು, ಒಕ್ಕಲಿಗ ನಾಯಕತ್ವ ವಹಿಸಿಕೊಳ್ಳಲು ಡಿಕೆ ಶಿವಕುಮಾರ್ ತುದಿಗಾಲು ನಿಂತಿದ್ದರೇ ಇತ್ತ ಮುಡಾ ಪ್ರಕರಣದಿಂದ ಪಾರಾಗಲು ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಿಳಿದಿದ್ದಾರೆ. ಹೀಗಾಗಿ ಜೆಡಿಎಸ್ ಬಿಜೆಪಿ ನಾಯಕರ ವಿರುದ್ಧ ಇಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಬ್ಬರಿಸಲಿದ್ದಾರೆ.

Key words: Congress, Janakalyana convention, Hassan, today