ಬೆಲೆ ಏರಿಕೆ “ಸೆಂಚುರಿ ಸ್ಟಾರ್‌ ” ಬಿಜೆಪಿಯಿಂದ ಜನಾಕ್ರೋಶ ಯಾತ್ರೆಯ ನಾಟಕ : ಎಂ.ಲಕ್ಷ್ಮಣ್‌ ವ್ಯಂಗ್ಯ.

BJP is the "century" star of price rise, 'Janakrosha Yatra' is a drama: M Lakshmanan

ಮೈಸೂರು, ಏ.೦೯,೨೦೨೫ :  ಬೆಲೆ ಏರಿಕೆಗಳ ವಿರುದ್ಧ ಬಿಜೆಪಿ ಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 100ಕ್ಕೂ ಹೆಚ್ಚು ವಸ್ತುಗಳ ಮೇಲೆ ಬೆಲೆ ಏರಿಸಿದೆ. ಅಂಕಿ ಅಂಶಗಳ ಸಮೇತ ಬಿಜೆಪಿ ನಾಯಕರಿಗೆ ಟಾಂಗ್‌ ನIಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.

ಬಿಜೆಪಿ ಜನಾಕ್ರೋಶ ಯಾತ್ರೆ ನಾಟಕದ ಯಾತ್ರೆ ಎಂದು ಲೇವಡಿ ಮಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದಿಷ್ಟು..

ಹಿಂದಿನ ಯುಪಿಎ ಸರಕಾರದ ಅಧಿಕಾರಾವಧಿಯಲ್ಲಿ ಒಂದು ಬ್ಯಾರಲ್ ಕಚ್ಛಾ ತೈಲದ ಬೆಲೆ 106 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ ಲೀಟರ್ ಗೆ 68 ರೂ ಮತ್ತು ಡೀಸಲ್ ಗೆ 55 ರೂ ಇತ್ತು. ಈಗಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್ ಗೆ 59 ಇದೆ. ಇಷ್ಟಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 103 ರೂ ಇದೆ.

ಚಿನ್ನ, ಬೆಳ್ಳಿ, ಸ್ಟೀಲ್, ಡಾಲರ್ ಮೌಲ್ಯ, ಕಾರಿನ ಬೆಲೆ ಸೇರಿದಂತೆ ವಿವಿಧ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ಹಿಂದಿನ ಯುಪಿಎ, ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದಂತಹ ಪದಾರ್ಥಗಳ ಬೆಲೆ ವ್ಯತ್ಯಾಸವನ್ನು ಅಂಕಿಅಂಶಗಳ ಸಮೇತ ತಾಳೆ ಹಾಕಿ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ ಲಕ್ಷ್ಮಣ್.

ಖಾಯಂ:

ಪೌರಕಾರ್ಮಿಕರನ್ನ  ಮೇ 1 ರಿಂದ  ಖಾಯಂ ಮಾಡುವ ಮಹತ್ವದ ನಿರ್ಧಾರವನ್ನು ಸಿಎಂ  ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ. ಇದೊಂದು ಮಹತ್ವದ ಹೆಜ್ಜೆ . ಈ ಮೂಲಕ ರಾಜ್ಯದಲ್ಲಿರುವ ಸುಮಾರು 7 ಲಕ್ಷದಷ್ಟು ಪೌರ ಕಾರ್ಮಿಕರಿಗೆ ಅನುಕೂಲ ಆಗುತ್ತದೆ. ಐದಾರು ಸಾವಿರ ಸಂಬಳ ಪಡೆಯುತ್ತಿದ್ದ ಪೌರ ಕಾರ್ಮಿಕರಿಗೆ ಈಗ ಉತ್ತಮ ಜೀವನ ನಡೆಸುವ ಗೌರವಯುತವಾದ ಮೊತ್ತದ ಸಂಬಳ ಬರಲಿದೆ. ಇದರಿಂದ ಅವರ ಬದುಕು ಹಸನಾಗುತ್ತದೆ. ಇಂತಹ ಒಂದು ಮಹತ್ತರವಾದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.

ಇದೇ ವೇಳೆ ಚುನಾವಣಾ ಸಂದರ್ಭದಲ್ಲಿ ಪೌರಕಾರ್ಮಿಕರ ಪಾದಪೂಜೆ ಮಾಡುವ ನಾಟಕವಾಡಿ ಪ್ರಚಾರ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ವರ್ತನೆಯನ್ನು ವ್ಯಂಗವಾಡಿದರು. ಪ್ರಚಾರಕ್ಕಾಗಿ ಪಾದಪೂಜೆ ಮಾಡುವುದಲ್ಲ, ಅವರ ಬದುಕು ಹಸನಾಗಲು ಇಂಥ ಕಾರ್ಯಗಳನ್ನು ಜಾರಿಗೆ ತರಬೇಕು ಎಂದರು.

ವಕ್ಫ್ ಬಿಲ್ ಮಂಡನೆ ವಿಚಾರ:

ದೇಶದಲ್ಲಿ ಸುಮಾರು 8.72 ಲಕ್ಷದ ಮೌಲ್ಯದ 38 ಲಕ್ಷ ಎಕರೆ ವಕ್ಫ್ ಪ್ರಾಪರ್ಟಿ ಇದೆ. ದೇಶಾದ್ಯಂತ 32 ವಕ್ಫ್ ಬೋರ್ಡ್ ಗಳಿವೆ. ಮುಸ್ಲಿಂ ವಕ್ಪ್ ಬೋರ್ಡ್ ಪ್ರಾಪರ್ಟಿಗಿಂತ ಹಿಂದು ದೇವಾಲಯಗಳ ಮುಜರಾಯಿ ಇಲಾಖೆ  ಸೇರಿದ ಪ್ರಾಪರ್ಟಿಗಳೇ ಅಧಿಕವಾಗಿವೆ.

ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು,ಆಂದ್ರ ಮತ್ತು ತೆಲಂಗಾಣ ನಾಲ್ಕು ರಾಜ್ಯಗಳಲ್ಲೇ

ಸುಮಾರು 13 ಲಕ್ಷ ಎಕರೆ ಹಿಂದು ದೇವಾಲಯಗಳ ಪ್ರಾಪರ್ಟಿ ಇದೆ. ಇಡೀ ದೇಶಾದ್ಯಂತ ಇನ್ನೆಷ್ಟು ಇದೆ  ಎನ್ನುವುದನ್ನ ಅರ್ಥ ಮಾಡಿಕೊಳ್ಳಿ. ದೇಶದಲ್ಲಿ ಮುಸ್ಲಿಮರನ್ನ  ಎರಡನೇ ದರ್ಜೆಯ ಪ್ರಜೆಗಳಾಗಿ ಬಿಂಬಿಸುವುದು ಬಿಜೆಪಿ ಮತ್ತು ಆರ್.ಎಸ್. ಎಸ್‌ ಉದ್ದೇಶವಾಗಿದೆ. ಆದ್ದರಿಂದಲೇ ಈ ರೀತಿ ಕಾಯ್ದೆಗಳನ್ನು ಹೇರುತ್ತಿದೆ ಎಂದರು.

ವಕ್ಫ್ ಕಾಯ್ದೆ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನ ಕಾಂಗ್ರೆಸ್ ಮಾಡಲಿದೆ. ಈಗಾಗಲೇ ನ್ಯಾಯಾಲಯದಲ್ಲೂ ಈ ಬಗ್ಗೆ ಪಕ್ಷ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಸದ್ಯದಲ್ಲೇ ಇದು ವಿಚಾರಣೆಗೆ ಬರಲಿದೆ. ದೇಶದ ಮುಸ್ಲೀಮರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಯಾವಾಗಲೂ ಇದೆ ಎಂದ ಲಕ್ಷ್ಮಣ್‌, ವಕ್ಪ್ ಬಿಲ್ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದರು.

key words:  BJP, “century” star, price hike, ‘Janakrosha Yatra’, drama, M Lakshmanan.

BJP is the “century” star of price rise, ‘Janakrosha Yatra’ is a drama: M Lakshmanan