ಬೆಂಗಳೂರು,ಜುಲೈ,28,2022(www.justkannada.in): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಇಂದು ನಡೆಯಬೇಕಿದ್ದ ಜನೋತ್ಸವ ಸಮಾವೇಶ ಕಾರ್ಯಕ್ರಮವನ್ನ ರದ್ದು ಮಾಡಿದ್ದೇವೆ ಎಂಧು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಆಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಸರ್ಕಾರ 3 ವರ್ಷ ಪೂರೈಸಿದೆ. ಜನೋತ್ಸವ ಸಮಾವೇಶ ರದ್ದುಗೊಳಿಸಿದ್ದೇವೆ. ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಎಲ್ಲರ ಜತೆ ಚರ್ಚಿಸಿ ಕಾರ್ಯಕ್ರಮ ರದ್ಧು ಮಾಡಿದ್ದೇವೆ. ನಮ್ಮ ಸಾಧನೆಗಳನ್ನ ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ನನ್ನ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರರಿದ್ದಾರೆ. ಅತ್ಯುತ್ತಮ ಸೇವಾ ಮನೋಭಾವ ಸಚಿವರು ಅಧಿಕಾರಿಗಳು ಇದ್ದಾರೆ. 2 ವರ್ಷ ಬಿಎಸ್ ವೈ ಅತ್ಯಂತ ಯಶಸ್ವಿಯಾಗಿ ಕೊರೋನಾ ಎದುರಿಸಿದ್ದರು. ಒಂದು ವರ್ಷ ಸಹಕರಿಸಿದ ಎಲ್ಲರಿಗೂ ಹಾಗೂ ಸರ್ಕಾರ ನಡೆಸಲು ಅವಕಾಶ ಕೊಟ್ಟ ವರಿಷ್ಠರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗಿದೆ ಕಳೇದ ವರ್ಷ 85 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಈವರೆಗೆ 9.98 ಲಕ್ಷ ವಿದ್ಯಾರ್ಥಿಗಳು ಲಾಭ ಪಡೆದಿದ್ದಾರೆ. ಸಂಧ್ಯಾ ಸುರಕ್ಷಾ ಮಾಶಾಸಸನವನ್ನ ನಮ್ಮ ಸರ್ಕಾರ ಹೆಚ್ಚಿಸಿದೆ. ಎಸ್ ಸಿ ಎಸ್ ಟಿ ಕುಟುಂಬಗಳಿಗೆ ಯೋಜನೆ ಹೆಚ್ಚಿಸಿದ್ದೇವೆ. ಸ್ಕಾಲರ್ ಶಿಪ್ ಹೆಚ್ಚಿಸಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿದ್ದೇವೆ. ಅಗತ್ಯವಿದ್ದರೇ ಯೋಗಿ ಮಾಡೆಲ್ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
Key words: Janotsava -cancellation – comprehensive -development -CM Bommai.
ENGLISH SUMMARY…
Janotsava cancelled following the killing of Praveen Nettaru: Focus on overall development of the State – CM Bommai
Bengaluru, July 28, 2022 (www.justkannada.in): Chief Minister Basavaraj Bommai informed that the Janotsav convention scheduled to be held today has been cancelled following the murder of BJP activist Praveen Nettaru.
He addressed a press meet today in Bengaluru on the occasion of completion of one year as the Chief Minister of Karnataka. “The State BJP government has completed three years. We have cancelled the Janotsav convention, after discussing with all the leaders. It is our duty to inform our achievements to the people. There are efficient performers in our cabinet. Also there are good ministers who are service-minded. Former CM B.S. Yediyurappa handled the COVID-19 Pandemic situation in the State efficiently for two years. I extend my gratitude to all those who cooperated with me in completing one year in the office as CM and also thank the BJP leaders at the national level for giving me an opportunity to serve in the highest office in the State,” he said.
Keywords: Chief Minister Bommai/ Janotsava/ cancelled.