ಬೆಂಗಳೂರು,ಜನವರಿ,1,2022(www.justkannada.in): ಜೆಸಿಬಿ ಹರಿದು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಉಪ್ಪಾರಪೇಟೆಯ ದನ್ವಂತರಿ ರಸ್ತೆ ಬಳಿ ಈ ಘಟನೆ ನಡೆದಿದೆ. 3 ವರ್ಷದ ಸಿಮಿಯಾನ್ ಮೃತಪಟ್ಟ ಮಗು.
ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ರಿವರ್ಸ್ ತೆಗೆಯುವಾಗ ಜೆಸಿಬಿ ಮಗುವಿನ ಮೇಲೆ ಹರಿದದೆ. ಸ್ಥಳಕ್ಕೆ ಉಪ್ಪಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಚಾಲಕ ಶಂಕರ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Key words: JCB- tearing- down- 3-year-old –child-death