ಹಾಸನ,ಅಕ್ಟೋಬರ್,4,2023(www.justkannada.in): ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಹಿಂದುಳಿದ ವರ್ಗದವರಿಗೂ ರಾಜಕೀಯವಾಗಿ ಅವಕಾಶ ನೀಡಿದ್ದು ದೇವೇಗೌಡರು. ಮೀಸಲಾತಿಯೇ ಇಲ್ಲದೆ ಹಿಂದುಳಿದ ವರ್ಗದ ಜನರಿಗೆ ಅದಿಕಾರ ಕೊಟ್ಟವರು ದೇವೇಗೌಡರು. ಕಾಂಗ್ರೆಸ್ ನವರು ಏನಾದ್ರು ಇಂತಹ ಅವಕಾಶ ಕೊಟ್ಟಿದಾರಾ? ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿ ಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ರೇವಣ್ಣ, ಹಾಸನದ ಜಿಪಂ ನಲ್ಲಿ ಜನರಲ್ ಸ್ಥಾನಕ್ಕೆ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನ ಅದ್ಯಕ್ಷ ರನ್ನಾಗಿ ಮಾಡಿದ್ದು ದೇವೇಗೌಡರು. ದೇವೇಗೌಡರು ಬರೋವರೆಗೆ ಅವರ ಯೋಗ್ಯತೆಗೆ ನಗರಸಭೆಗೆ ಅಧ್ಯಕ್ಷರನ್ನ ಮಾಡೋಕೆ ಆಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಜೆಡಿಎಸ್ ನಾಯಕ ರೇವಣ್ಣ ಕಿಡಿಕಿಡಿಯಾದರು.
ಕಾಂಗ್ರೆಸ್ ಪಕ್ಷಕ್ಕೆ ಈಗ ಅಲ್ಪ ಸಂಖ್ಯಾತರ ಬಗ್ಗೆ ಕಾಳಜಿ ಬಂದಿದೆ. 60 ವರ್ಷ ಅವರಿಂದ ಓಟ್ ಹಾಕಿಸಿಕೊಂಡಿದ್ದೀರಿ, ಈಗ ಅವರ ಸೇವೆ ಮಾಡಿ. ಆದರೆ ಈ ಹಿಂದೆ ಕೋಮುವಾದಿಗಳ ಬಳಿ ಬಸ್ ಓಡಿಸಿಕೊಂಡು ಹೋಗಿದ್ದವರು ಯಾರು? ಎಂದು ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದರು.
ಮೈತ್ರಿ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ರೇವಣ್ಣ, ಸಿಎಂ ಇಬ್ರಾಹಿಂ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ. ಬೇಕಿದ್ದರೆ ರಾಜಕೀಯ ನಿವೃತ್ತಿ ಆಗ್ತಿನಿ, ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದಾರೆ. ಅವರು ಅಕ್ಟೋಬರ್ 16 ರವರೆಗೆ ಏನೂ ಮಾತಾಡಲ್ಲ ಎಂದಿದಾರೆ. ಆ ನಂತರ ಮಾತಾಡೋಣ ಎಂದಿದಾರೆ. ಅವರು ಯಾವುದೇ ಕಾರಣದಿಂದ ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ ಎಂದು ತಿಳಿಸಿದರು.
Key words: JDS -chance – minorities-Former Minister- HD Revanna