ಬೆಂಗಳೂರು,ಜನವರಿ,24,2023(www.justkannada.in): ಜೆಡಿಎಸ್ ಜೊತೆ ಕೈಜೋಡಿಸಿದ್ದು ಕೋಮುವಾದಿ ಬಿಜೆಪಿ ದೂರವಿಡಲು.ಹೆಚ್.ಡಿ ಕುಮಾರಸ್ವಾಮಿ ಬಹಳ ಪರೋಪಾಕಾರಿ ಸಿಎಂ ಅಂತಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿ ಜನಾಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಅಧೀಕಾರದಿಂದ ದೂರವಿಡಲು ಜೆಡಿಎಸ್ ಗೆ ಬೆಂಬಲ ಕೊಟ್ಟಿದ್ದವು. ಈಗ ನಮ್ಮ ಮನೆಬಾಗಿಲಿಗೆ ಬಂದರು ಎಂದು ಹೆಚ್.ಡಿಕೆ ಹೇಳುತ್ತಿದ್ದಾರೆ. ಕೋಮುವಾದಿ ಬಿಜೆಪಿ ದೂರ ಇಡಲು ಜೆಡಿಎಸ್ ಜೊತೆ ಹೋಗಿದ್ದವು ಅಷ್ಟೆ. ಹೆಚ್.ಡಿ ಕುಮಾರಸ್ವಾಮಿ ಬಹಳ ಪರೋಪಾಕಾರಿ ಸಿಎಂ ಅಂತಾ ಹೋಗಿರಲಿಲ್ಲ. ಬಿಜೆಪಿ ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅಲ್ಪಸಂಖ್ಯಾತರಿಗೆ ಹೇಳುತ್ತೇನೆ. ಬಿಜೆಪಿ,ಜೆಡಿಎಸ್ ಮೇಲೆ ನಂಬಿಕೆ ಇಡಬೇಡಿ ಎಂದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ಗುಡುಗಿದ ಸಿದ್ಧರಾಮಯ್ಯ, ಮೋದಿಯವರು ಏಕೆ ಸುಳ್ಳು ಹೇಳುತ್ತಿದ್ದೀರಿ ಮೋದಿ ಅತೀ ಸುಳ್ಳುಹೇಳಿದ ಪ್ರಧಾನಿ. ನನಗೆ ಪ್ರಧಾನಿ ಹುದ್ದೆ ಮೇಲೆ ತುಂಬಾ ಗೌರವವಿದೆ. ಆದರೆ ಸುಳ್ಳು ಹೇಳಿ ದೇಶ ಅಭಿವೃಧ್ದಿ ಮಾಡಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
Key words: JDS – communalist -BJP – HD Kumaraswamy- Siddaramaiah