ಮೈಸೂರು,ಜನವರಿ,30,2023(www.justkannada.in): ಜೆಡಿಎಸ್ ಅಂದ್ರೆ ಅದೊಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಅಪ್ಪ,ಮಕ್ಕಳು, ಮೊಮ್ಮಕ್ಕಳು ಈಗ ಜೊತೆಗೆ ಸೊಸೆಯಂದಿರು ಕೂಡ ರಾಜಕೀಯಕ್ಕೆ ಬಂದಿದ್ದಾರೆ. ಈಗ ಅವರ ಕುಟುಂಬದಲ್ಲೇ ಟಿಕೆಟ್ ಗಾಗಿ ಕಿತ್ತಾಟ ನಡೆಯುತ್ತಿದೆ. ಇದೆಲ್ಲವನ್ನ ಜನರು ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಲೇವಡಿ ಮಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ಧೃವನಾರಾಯಣ್, ಹಾಸನದಲ್ಲಿ ರೇವಣ್ಣ ಅವರು ಶಾಸಕರು, ಮಕ್ಕಳಿಬ್ಬರಲ್ಲಿ ಒಬ್ಬ ಸಂಸದ, ಮತ್ತೊಬ್ಬ ಪರಿಷತ್ ಸದಸ್ಯ, ಈಗ ಭವಾನಿ ರೇವಣ್ಣ ಅವರು ಎಂಎಲ್ ಎ ಆಗಲು ಟಿಕೆಟ್ ಬಯಸದ್ದಾರೆ. ಇದರಿಂದ ಆ ಭಾಗದ ಜೆಡಿಎಸ್ ಮುಖಂಡರು ಬೇಸರಗೊಂಡು ನಮ್ಮ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಆ ಭಾಗದ ಹಾಲಿ ಶಾಸಕರಾದ ಶಿವಲಿಂಗೇಗೌಡ, ಗುಬ್ಬಿ ಶ್ರಿನಿವಾಸ್ ಮತ್ತು ದೇವೇಗೌಡ ಅತ್ಯಾಪ್ತರಾದ ವೈ.ಎಸ್.ವಿ ದತ್ತ ಅವರು ಈ ಬೆಳವಣಿಗೆ ಎಲ್ಲಾ ನೋಡಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದರು.
ಇನ್ನು ಮಾಜಿ ಶಾಸಕ ವಾಸು ಅವರ ಮಕ್ಕಳು ಬಿಜೆಪಿಗೆ ಹೋಗಿದ್ದು ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ. ಅವರ ತಂದೆ ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳಾಗಿದ್ದವರು. ಅವರನ್ನ ಲೆಕ್ಕಿಸದೆ ಇಂದು ಅವರ ಮಕ್ಕಳು ಬಿಜೆಪಿಗೆ ಸೇರಿರುವುದು ಸರಿಯಲ್ಲ. ಪಕ್ಷದ ಒಂದು ತತ್ವ ಸಿದ್ದಾಂತ ಇಟ್ಟುಕೊಂಡು ಬಂದ ವಾಸು ಪುತ್ರರು ಏಕಾಏಕಿ ಪಕ್ಷ ತೊರೆಯುವ ಕೆಲಸ ಮಾಡಬಾರದಿತ್ತು ಎಂದು ಆರ್ ಧ್ರುವನಾರಾಯಣ್ ಬೇಸರ ವ್ಯಕ್ತಪಡಿಸಿದರು.
Key words: JDS – family-owned –party-R. Dhruvanarayan-mysore