ಬೆಂಗಳೂರು,ಮಾರ್ಚ್,12,2022(www.justkannada.in): ಮುಂದಿನ ಚುನಾವಣೆಗೆ ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಹೇಳಿದ್ದಿಷ್ಟು…
ಐದು ರಾಜ್ಯಗಳ ಫಲಿತಾಂಶದಲ್ಲಿ ತೀರ್ಪು ಬಿಜೆಪಿ ಪರ ಇದೆ. ನಾನು ಸ್ಥಳೀಯ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು ಇಲ್ಲಿಯವರೆಗೆ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನೋದು ವಾಸ್ತವಾಂಶ.
ನಾನು ಬಿಜೆಪಿ ಬಜೆಟ್ ನೋಡಿದ್ದೇನೆ. ಕೃಷ್ಣಾ ಮೇಲ್ದಂಡೆ ಐದು ಸಾವಿರ ಕೋಟಿ ಇಟ್ಟಿದ್ದಾರೆ, ಇದು ಯಾವ ಖುಷಿಗೆ? ನನ್ನ ಜಿಲ್ಲೆಯ ಒಂದು ಕುಡಿಯುವ ನೀರಿನ ಯೋಜನೆಗೆ ಮೂರು ಸಾವಿರ ಕೋಟಿ ಇಟ್ಟಿದ್ದಾರೆ. ಅದರ ಯೋಜನಾ ವೆಚ್ಚ 8 ಸಾವಿರ ಕೋಟಿ ಇದೆ. ಏನು ಮಾಡ್ತಾರೆ ಮೂರು ಸಾವಿರ ಕೋಟಿಯಲ್ಲಿ? ನಾನು ಪ್ರಧಾನಿ ಆಗಿದ್ದಾಗ ಕಾವೇರಿ ಬೇಸಿನ್ ಗೆ ಅನುದಾನ ಕೊಟ್ಟಿದ್ದೆ.
ಈ ಪಕ್ಷ ಉಳಿಸಬೇಕೆನ್ನುವ ಕಮಿಟ್ ಮೆಂಟ್ ಯಾರಿಗೆ ಇದೆಯೋ ಅಂಥವರಿಂದ ಸಂಘಟನೆ ಮಾಡುತ್ತೇವೆ. ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ. ನೀರು ತರುತ್ತೇವೆ ಎಂದು ಎರಡು ತಿಂಗಳ ಹಿಂದೆ ಕಾಂಗ್ರೆಸ್ ಅವರು ಪಾದಯಾತ್ರೆ ಮಾಡಿದ್ರು , ನೀರಾವರಿ ಯೋಜನೆಗೆ ನಾನು ಏನೇನು ಕೊಟ್ಟಿದ್ದೀನಿ ಜನರ ಮುಂದೆ ಇದೆ . ಬೇರೆ ಬೇರೆ ಸರ್ಕಾರಗಳು ಏನು ಮಾಡಿದವು ಅನ್ನುವುದು ಈಗ ಬೇಡ. ರಾಮನಗರದಿಂದಲೇ ಪಾದಯಾತ್ರೆ ಹೊರಡಬೇಕು ಅಂತ ಕಾಂಗ್ರೆಸ್ ನಾಯಕರು ಹೇಳಿದರು. ನಾನು ಚನ್ನಪಟ್ಟಣ, ರಾಮನಗರ ಮತ್ತು ಬೆಂಗಳೂರಿಗೆ ನೀರು ತರಿಸಿದೆ
ಬಿಜೆಪಿ, ಜೆಡಿಎಸ್ ಏನು ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದರು , ನೀವೇ ಉಳಿಸಿಕೊಡಬೇಕು ಅಂತ ನನ್ನ ಮನೆಗೆ ಬಂದಿದ್ದರು ಆಗ, ಈಗ ಕಾವೇರಿ ಕೊಳ್ಳದಲ್ಲಿ ನೀರು ತಂದೇ ಬಿಟ್ವೆವು ಎಂದು ಕಾಂಗ್ರೆಸ್ ನವರು ಹೇಳ್ತಾರೆ. 20ನೇ ತಾರೀಖು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ. ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ , ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ
ನಾನು ಪಿಎಂ ಆದೆ, ಇಲ್ಲಿ ಪಟೇಲ್ ಮತ್ತು ಸಿದ್ದರಾಮಯ್ಯ ಆಡಳಿತ ಮಾಡಿದ್ರು , ಬಳಿಕ ನಡೆದ ಚುನಾವಣೆಯಲ್ಲಿ ಬರೀ ಒಂದು ಸೀಟ್ ಗೆದ್ದರು. ಮೂರೂವರೆ ವರ್ಷ ರಾಜ್ಯ ಆಳ್ವಿಕೆ ಮಾಡಿದರು. ಒಬ್ಬ ಕನ್ನಡಿಗ ಪ್ರದಾನ ಮಂತ್ರಿ ಆಗೋದನ್ನು ಸಹಿಸಲು ಕೆಲವರಿಗೆ ಆಗಲಿಲ್ಲ. ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡ್ತಾರೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ , ಈ ಭಾವನೆ ನಮ್ಮಲ್ಲೂ ಬರಬೇಕು, ಅದಕ್ಕಾಗಿ 20ನೇ ತಾರೀಕು ಬೆಂಗಳೂರಿನಲ್ಲೇ ಸಮಾವೇಶ ಮಾಡುತ್ತೇವೆ.
ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ ಪಕ್ಷ ಸೇರುವ ವಿಚಾರ. ಇದು ಹಲವಾರು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಆದ್ರೆ ಇದರ ಬಗ್ಗೆ ನನ್ನ ಬಳಿ ಬಂದು ಅವರು ಇನ್ನೂ ಪಕ್ಷಕ್ಕೆ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಅವರಿಗೆ ಸಾಕಷ್ಟು ಪೆಟ್ಟು ಕೊಟ್ಟರು. ಆ ನೋವು ಅವರಿಗೆ ಇದೆ, ಮುಂದೇನಾಗುತ್ತೆ ನೋಡೋಣ.
ಬಜೆಟ್ ಭಾಷಣದಲ್ಲಿ ಕುಮಾರಸ್ವಾಮಿ ಭಾಷಣ ವಿಚಾರ, ಕುಮಾರಸ್ವಾಮಿ ಅನಾವಶ್ಯಕ ಏನಾದರೂ ಮಾತಾಡಿದ್ದಾರಾ? ಪ್ರತಿಯೊಂದು ಅಂಕಿ ಅಂಶದ ಜೊತೆ ಮಾತಾಡಿದ್ದಾರೆ. ಜನ ಮೆಚ್ಚಿಸಲು ಹಾಗೆ ಹೀಗೆ ಮಾತನಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ಅಭ್ಯರ್ಥಿ ಹಾಕುತ್ತೇವೆ , ಚುನಾವಣಾ ಪೂರ್ವ ಮೈತ್ರಿ ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ. ಒಬ್ಬರೋ ಇಬ್ಬರೋ ಪಕ್ಷ ಬಿಟ್ಟರೆ ನಾವು ಹೆದರಿಕೊಳ್ಳುವುದಿಲ್ಲ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ
ಅವಧಿಗೂ ಮುನ್ನ ಚುನಾವಣಾ ವಿಚಾರ. ಯಾಕೆ ಅಗಬಾರದು? ನಾವು ಚುನಾವಣಾ ಎದುದರಿಸಲು ರೆಡಿ ಇದ್ದೀವಿ , ಆದ್ರೆ ಅಷ್ಟು ಸುಲಭವಲ್ಲ. ಯಡಿಯೂರಪ್ಪ ಸಹ ಇದೇ ಮಾತನ್ನ ಹೇಳಿದ್ದಾರೆ. ಜೊತೆಗೆ ಯಶಸ್ವಿಯಾಗೋದು ಸುಲಭವಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.
Key words: jds-Former CM-HD Devegowda
ENGLISH SUMMARY…
No alliance in next elections: We will go to the people directly-former PM HDD
Bengaluru, March 12, 2022 (www.justkannada.in): Former Prime Minister H.D. Devegowda today informed that JDS will not make any alliance with any party in the next assembly elections.
He addressed a press meet at the JDS office, located in J.P. Nagar, Bengaluru today. “The assembly election results of the five states have favored BJP. I won’t like to speak about the State Congress party. BJP came to power at the center after Manmohan Singh and has not looked back since then. It is a fact. I have observed the BJP’s budget. They have allocated Rs.5,000 crore for the Upper Krishna Project, what is it for? The state BJP also has announced Rs.3,000 crore for the drinking water project for my native district. The total project cost is Rs. 8,000 crores. What can they achieve in Rs.3,000 crore? I had allocated money for the Kaveri basin when I was the PM,” he explained.
Replying to a question on the probability of early election he said, ‘Why Not? We are ready to face the elections. But that is not so easy. Even Yediyurappa has also told the same. It is also not so easy to make it successful according to me,” he added.
Keywords: Former PM H.D. Devegowda/ No alliance/ next assembly election