ಮೈಸೂರು,ಮಾರ್ಚ್,22,2021(www.justkannada.in): ಈಗಾಗಲೇ ಜೆಡಿಎಸ್ ನಿಂದ ದೂರ ಉಳಿದಿರುವ ಶಾಸಕ ಜಿ.ಟಿ ದೇವೇಗೌಡರಿಗೆ ಟಾಂಗ್ ನೀಡಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಜಿ.ಟಿ.ದೇವೆಗೌಡಗೆ ಜೆಡಿಎಸ್ಸೆ ಅನಿವಾರ್ಯ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ, ಶಾಸಕ ಜಿ.ಟಿ.ದೇವೆಗೌಡಗೆ ಜೆಡಿಎಸ್ಸೆ ಅನಿವಾರ್ಯ. ಜೆಡಿಎಸ್ ಗೂ ಜಿ.ಟಿ.ದೇವೆಗೌಡ ಅನಿವಾರ್ಯ. ಸಿದ್ದರಾಮಯ್ಯ ಇರೋವರೆಗೂ ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲ. ಈಗಾಗಲೇ ಬಿಜೆಪಿಗೆ ಹೋಗಿ ಬಂದಿದ್ದಾರೆ ಎಂದರು.
ಸಿಡಿ ಪ್ರಕರಣವನ್ನ ಸಿಬಿಐಗೆ ವಹಿಸಬೇಕು….
ಕೊರೊನಾ ಬಂದು ಸಿಡಿ ಪ್ರಕರಣ ಮುಚ್ಚಿಕೊಂಡಿದೆ. ಬಿಜೆಪಿ ನಾಯಕರೇ ಹೇಳಿರುವಂತೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಸತ್ಯಾಸತ್ಯತೆ ಹೊರಬರಲು ಕೂಲಂಕುಶವಾಗಿ ಸಮಗ್ರ ತನಿಖೆ ಆಗಬೇಕು. ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿ ಹೇಳಿದಂತೆ ತನಿಖೆ ಹಳ್ಳ ಹಿಡಿಯುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದೆ. ಕೊರೊನಾ ಎರಡನೇ ಅಲೆ ನೋಡುದ್ರೆ ಮತ್ತೆ ಆತಂಕ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಟೀಕಿಸಿದರು.
ENGLISH SUMMARY….
JDS is inevitable for MLA GTD – former MP L.R. Shivaramegowda
Mysuru, Marc. 22, 2021 (www.justkannada.in): Former MP L.R. Shivaramegowda opined that the JDS is inevitable for MLA G.T. Devegowda, who has remained away from the party for quite some time now.
Speaking with the media persons in Mysuru today the former MP expressed his view that it is inevitable for both MLA GTD and JDS party. There is no opportunity for GTD till Siddaramaiah is in Congress. He has already returned from the BJP, he said.
Responding to the CD case he said Corona has made people forget the sleaze CD case. It should be handed over to the CBI as BJP leaders themselves have told. A thorough investigation is needed to extract the truth. Presently the investigation appears to be going on the wrong way as our leader HDK said.
“The BJP’s politics is misleading the people. Fear and panic have appeared again due to the second wave of Corona pandemic. The State Government has not taken any precautionary measures,” he accused.
Keywords: former MP L.R. Shivaramegowda/ MLA G.T. Devegowda/ former CM H.D.Kumaraswamy/ JDS inevitable
Key words: JDS- indispensable -r MLA- GT Deve Gowda-Former MP- LR Shivaramegowda.