ತುಮಕೂರು,ಜೂ,1,2019(www.justkannada.in): ತುಮಕೂರಿನಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ನಾಯಕರ ನಡುವೆ ಟಾಕ್ ಫೈಟ್ ಮುಂದುವರೆದಿದ್ದು, ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಕಿದ್ದ ಸವಾಲಿಗೆ ಜೆಡಿಎಸ್ ಶಾಸಕ ಗೌರಿ ಶಂಕರ್ ಟಾಂಗ್ ಕೊಟ್ಟಿದ್ದಾರೆ.
ಮಧುಗಿರಿಯಲ್ಲಿ ಬಂದು ಸ್ಪರ್ಧಿಸುವಂತೆ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಗೆ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಸವಾಲು ಹಾಕಿದ್ದರು. ಈ ಕುರಿತು ಮಾತನಾಡಿದ ಜೆಡಿಎಸ್ ಶಾಸಕ ಗೌರಿ ಶಂಕರ್, ನಿಮ್ಮ ಕ್ಷೇತ್ರದಲ್ಲಿ ಈಗಾಗಲೇ ನೀವು ಸೋತಿದ್ದೀರಿ. ಮತ್ತೆ ಮತ್ತೆ ನಿಮ್ಮನ್ನು ಸೋಲಿಸುವ ತಾಕತ್ತು ನಮಗಿದೆ. ಮೋದಿ ಅವರ ಅಲೆಯಿಂದ ಅಲ್ಲಿ ಲೀಡ್ ಬಂದಿದೆ ವಿನಹ ಯಾವುದೇ ನಾಯಕನ ವರ್ಚಸ್ಸಿನಿಂದಲ್ಲ ಎಂದು ಕೆ.ಎನ್ ರಾಜಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿದ್ದರೂ ದೋಸ್ತಿ ಪಕ್ಷದ ಮುಖಂಡರು ಪರಸ್ಪರ ವಾಕ್ ಸಮರ ನಡೆಸುತ್ತಿದ್ದರು. ತುಮಕೂರು ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ಕೆ.ಎನ್ ರಾಜಣ್ಣ ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡರ ವಿರುದ್ದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ರಾಜಣ್ಣ ಅವರ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದರು. ಬಳಿಕ ಮೈತ್ರಿ ಅಭ್ಯರ್ಥಿ ಪರ ರಾಜಣ್ಣ ಪ್ರಚಾರಕ್ಕೆ ಬಾರದೆ ತಟಸ್ಥವಾಗಿದ್ದರು.
Key words: JDS legislator Gauri Shankar gave Tong to Congress leader KN Rajanna .
#tumakuru #congress #knrajanna #jds #gowrishankar