ಕೊಡಗು,ಜು,8,2019(www.justkannada.in): ಈಗಾಗಲೇ 13 ಮಂದಿ ಶಾಸಕರ ರಾಜೀನಾಮೆ ಹಿನ್ನೆಲೆ ಅಪರೇಷನ್ ಕಮಲ ತುತ್ತಾಗದಂತೆ ತಡೆಯಲು ಜೆಡಿಎಸ್ ನಾಯಕರಿಂದ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಜೆಡಿಎಸ್ ಶಾಸಕರಿಗೆ ಕೊಡಗಿನ ರೆಸಾರ್ಟ್ ನಲ್ಲಿ 35 ರೂಂ ಬುಕ್ಕಿಂಗ್ ಮಾಡಲಾಗಿದ್ದು ಇಂದು ಸಂಜೆ ವೇಳೆಗೆ ರೆಸಾರ್ಟ್ ಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟ್ ನಲ್ಲಿ ರೂಂ ಬುಕಿಂಗ್ ಮಾಡಲಾಗಿದೆ. ರಾತ್ರಿ 1 ಗಂಟೆಗೆ ರೆಸಾರ್ಟ್ ಎಂಡಿ ಕಡೆಯಿಂದ ರೂಂಗಳು ಬುಕ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ರೂಂ ಬುಕ್ಕಿಂಗ್ ಬಗ್ಗೆ ಪ್ಯಾಡಿಂಗ್ ಟನ್ ಹೋಟಲ್ ಮ್ಯಾನೇಜರ್ ರಶ್ಮಿ ತಿಳಿಸಿದ್ದಾರೆ.
ಸಂಜೆ ವೇಳೆಗೆ ಬರೋದಾಗಿ ಜೆಡಿಎಸ್ ಮುಖಂಡರು ರೂಂ ಬುಕ್ ಮಾಡಿದ್ದು ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಲಾಗಿದೆ. 35 ರೂಂ ಗಳಲ್ಲಿ 10 ಫೂಲ್ ವಿಲ್ಲಾ ,15 ಡಿಲೆಕ್ಸ್, 10 ಕಾಟೇಜ್ ರೂಂಗಳು ಬುಕ್ಕಿಂಗ್ ಆಗಿವೆ ಎನ್ನಲಾಗಿದೆ. ಕಳೆದ ವರ್ಷ ತಮಿಳುನಾಡು ರಾಜಕಾರಣಿಗಳು ಇದೇ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು.
Key words: JDS- legislators shift –kodagu-resort