ಬೆಂಗಳೂರು,ಏಪ್ರಿಲ್,27,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಜೆಡಿಎಸ್ ಇಂದು ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು ಹಲವು ಭರಪೂರ ಭರವಸೆಗಳನ್ನ ನೀಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆಯಲ್ಲಿ ಮಾತೃಶ್ರಿ ಯೋಜನೆ ಜಾರಿ ಮಾಡುವುದು, ಈ ಯೋಜನೆಯಲ್ಲಿ ಗರ್ಭಿಣಿಯರಿಗೆ 6 ತಿಂಗಳು 6 ಸಾವಿರ ರೂ ಭತ್ಯೆ ನೀಡಲಾಗುತ್ತದೆ. ಸ್ತ್ರಿಶಕ್ತಿ ಸಾಲಮನ್ನಾ, ವಿಧವಾ ವೇತನ 2 ಸಾವಿರ ರೂ. ಹೆಚ್ಚಳ ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸ ಖಾಯಂ. ಕೃಷಿಕರಿಗಾಗಿ ರೈತಬಂಧು ಯೋಜನೆ ಜಾರಿ. ಕೃಷಿಕರಿಗೆ 2 ಸಾವಿರ ರೂ ಸಹಾಯಧನ. ಬಿತ್ತನೆ ಬೀಜ, ಗೊಬ್ಬರ ಖರೀದಿಸಲು 10 ಸಾವಿರ ರೂ ಸಹಾಯಧನ ನೀಡಲಾಗುತ್ತದೆ. ರೈತ ಯುವಕರನ್ನ ಮದುವೆಯಾಗುವ ಯುವತಿಯರಿಗೆ 2 ಲಕ್ಷ ರೂ ಪ್ರೋತ್ಸಾಹ ಧನ, ಆಟೋ ಚಾಲಕರಿಗೆ 2ಸಾವಿರ ರೂ. ಮಾಶಾಸನ. ಹಿರಿಯ ನಾಗರಿಕರಿಗೆ 5 ಸಾವಿರ ರೂ. ಮಾಶಾಸನ ನೀಡುವುದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ.
ಪಂಚರತ್ನ ಯೋಜನೆಗಳಾದಂತ ವಸತಿಯ ಆಸರೆ, ಶಿಕ್ಷಣವೇ ಅಧುನಿಕ ಶಕ್ತಿ, ಆರೋಗ್ಯ, ಸಂಪತ್ತು. ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಮತ್ತು ರೈತ ಚೈತನ್ಯ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಕಳೆದ ವರ್ಷ ನವೆಂಬರ್ 18ರಂದು ಮುಳುಬಾಗಿಲು ಕ್ಷೇತ್ರದಿಂದ ಆರಂಭಗೊಂಡ ಪಂಚರತ್ನ ರಥಯಾತ್ರೆ ನಾಡಿನ ಜನತಂತ್ರ ವ್ಯವಸ್ಥೆಯ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.
Key words: JDS –manifesto- released- many – promises-HD kumaraswamy