ಈ ಬಾರಿ ಜೆಡಿಎಸ್ ಗೆ 30 ರಿಂದ 40 ಸ್ಥಾನ ಬಂದ್ರೆ ನಾನು ಅಧಿಕಾರದಿಂದ ದೂರ- ಮಾಜಿ ಸಿಎಂ ಹೆಚ್.ಡಿಕೆ.

ಮೈಸೂರು,ಅಕ್ಟೋಬರ್,2022(www.justkannada.in): ಈ ಬಾರಿ ಜೆಡಿಎಸ್ ಗೆ 30 40 ಸ್ಥಾನ ಬಂದರೆ ನಾನು ಅಧಿಕಾರದಿಂದ ದೂರ ಇರುತ್ತೇನೆ. ಇದು ನನ್ನ ನಿರ್ಧಾರ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ಚಾಮಿ, ಈ ಬಾರಿ ಜೆಡಿಎಸ್ ಗೆ 30, 40 ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ. ನಮ್ಮಲ್ಲೇ ಯಾರದರೂ ಒಬ್ಬರನ್ನೂ ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ ಎಂದು ತಿಳಿಸಿದರು.

ಖರ್ಗೆ ಕರ್ನಾಟಕದ ಮಟ್ಟಿಗೆ ಅವರು ಇನ್ನೊಂದು ಪವರ್ ಸೆಂಟರ್ ಆಗುತ್ತಾರೆ.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅದು ಅವರ ಆಂತರಿಕ ವಿಚಾರ. ಆದರೆ ಕನ್ನಡಿಗರೊಬ್ಬರು ಆ ಸ್ಥಾನಕ್ಕೆ ಆಯ್ಕೆಯಾಗಿರುವುದು ಸಂತೋಷ ನೀಡಿದೆ. ಹಿಂದೆ ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು. ಆಗಿನ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ.  ಖರ್ಗೆ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಆಗುತ್ತ ಅಂತ ಕಾದುನೋಡಬೇಕು. ಕರ್ನಾಟಕದ ಮಟ್ಟಿಗೆ ಅವರು ಇನ್ನೊಂದು ಪವರ್ ಸೆಂಟರ್ ಆಗುತ್ತಾರೆ ಎಂದು ಚಾಮುಂಡಿಬೆಟ್ಟದಲ್ಲಿ  ಭವಿಷ್ಯ ನುಡಿದರು.

ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ.

ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ. ಪಂಚರತ್ನದ 5 ಯೋಜನೆಗಳನ್ನ 5 ವರ್ಷಗಳಲ್ಲಿ ಅನುಷ್ಟಾನ ಮಾಡುತ್ತೇನೆ. ಕಾರ್ಯಕ್ರಮ ಅನುಸ್ಟಾನ ಮಾಡದೆ ಇದ್ರೆ ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ಈ ಮಾತು ಹೇಳುತ್ತಿದ್ದೇನೆ. ಪಂಚರತ್ನ ಯೋಜನೆ ಅನುಷ್ಟಾನ ಆಗಬೇಕಾದ್ರೆ ಸಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಸಾಧ್ಯ‌. ಈ ಕಾರಣ ನಾನು ಸಮಿಶ್ರ ಸರ್ಕಾರ ಸಂದರ್ಭ ಬಂದ್ರೆ ಸಿಎಂ ಆಗುವುದಿಲ್ಲ ಎಂದು ಹೇಳುತ್ತಿದ್ದೇನೆ  ಎಂದು ಹೆಚ್.ಡಿಕೆ ನುಡಿದರು.

ವಿಧಾನಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸುಳಿವು

ವಿಧಾನಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ನಿಖಿಲ್ ತಮ್ಮ ಶಕ್ತಿಯನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಿಕೊಂಡಿದ್ದಾರೆ. ಈಗ ಸಿದ್ಧವಾಗಿರುವ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರೂ ಇರಬಹುದು ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ದ ಸಿಎಂ ಬಳಿ ದಾಖಲೆ ಇದ್ದರೆ ತನಿಖೆ ಮಾಡಿಸಿ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,  ಸಿಎಂ ಬಳಿ ದಾಖಲೆ ಇದ್ದರೆ ತನಿಖೆ ಮಾಡಿಸಿ. ಯಾಕೆ ವಿಳಂಬ ಮಾಡುತ್ತಿದ್ದೀರಾ. ನಿಮ್ಮ ಭಾಷಣ ಆರೋಪಕ್ಕೆ ಸೀಮಿತವಾಗಬಾರದು. ಸಿದ್ದರಾಮಯ್ಯ ಕೂಡ ತನಿಖೆಗೆ ಆಗ್ರಹಿಸಿದ್ದಾರೆ. ನೀವು ಮೊದಲು ತನಿಖೆ ಮಾಡಿಸಿ ಎಂದು ಸಲಹೆ ನೀಡಿದರು.

ಇತ್ತೀಚಿಗೆ ಕಾಂಗ್ರೆಸ್, ಬಿಜೆಪಿ ಪರಸ್ಪರ ಅವರೇ ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ವಿಚಾರ ಎತ್ತುತ್ತಿಲ್ಲ. ಅದರ ಅರ್ಥವನ್ನ ಸೂಕ್ಷ್ಮವಾಗಿ ಗಮನಿಸಿ. ಜೆಡಿಎಸ್ ಪಕ್ಷವನ್ನ ಒಳ್ಳೆತನದಲ್ಲಿ ಇಟ್ಟುಕೊಳ್ಳಲು ಕಾಂಗ್ರೆಸ್ ಬಿಜೆಪಿ ಈ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಬಿಜೆಪಿಗೆ ಸ್ವತಂತ್ರ ಸರ್ಕಾರ ಬರುವ ಯಾವ ವಿಶ್ವಾಸವೂ ಇಲ್ಲ. ಜೆಡಿಎಸ್ ಅವಶ್ಯಕತೆ ಬೇಕಾಗಬಹುದು ಎಂದು ನಮ್ಮನ್ನ ಯಾರು ಟೀಕೆ ಮಾಡುತ್ತಿಲ್ಲ. ಇದೆಲ್ಲವೂ ನನಗೆ ಅರ್ಥವಾಗಿದೆ ಎಂದರು.

ಶಾಸಕ ಜಿ.ಟಿ ದೇವೇಗೌಡರ ರಾಜಕೀಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಜಿ.ಟಿ. ದೇವೇಗೌಡರ ಆಹ್ವಾನದ ಮೇರೆಗೆ ಎಚ್.ಡಿ ದೇವೇಗೌಡರು ಇಂದು ಜಿ.ಟಿ.ಡಿ ಮನೆಗೆ ಹೋಗುತ್ತಿದ್ದಾರೆ. ಜಿ.ಟಿ.ಡಿ ಜೊತೆ ನಾನು ಮಾತನಾಡಿದ್ದೇನೆ ಎಂದರು.

ಅರಸಿಕೆರೆ ಶಾಸಕ ಶಿವಲಿಂಗೇಗೌಡ ಕಾರ್ಯಾಗಾರಕ್ಕೆ ಗೈರು ವಿಚಾರ,  ಅವರಿಗೆ ಸ್ಥಳೀಯವಾಗಿ ಒಂದಿಷ್ಟು ಸಮಸ್ಯೆಗಳಿವೆ. ಆ ಕಾರಣಕ್ಕಾಗಿ ಅವರು ಜೆಡಿಎಸ್ ಕಾರ್ಯಾಗಾರಕ್ಕೆ ಬಂದಿಲ್ಲ. ನಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿದ್ದಾರೆ. ಇರುವುದು ಬಿಡಿವುದು ಅವರ ವೈಯಕ್ತಿಕ ನಿರ್ಧಾರ. ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಸೋಲಿಸುವ ಹುನ್ನಾರಗಳನ್ನ ನಡೆಸಿವೆ‌. ಅದೆಲ್ಲದರ ಲೆಕ್ಕಚಾರದಲ್ಲಿ ಅವರು ತೊಡಗಿದ್ದಾರೆ. ಈಗಾಗಲೇ ಮೈಸೂರು ಭಾಗದ ಅಭ್ಯರ್ಥಿಗಳ ಬಹುತೇಕ ಪಟ್ಟಿ ಸಿದ್ದವಿದೆ ಎಂದರು.

Key words: JDS – power – Former CM -H.D.kumaraswamy-mysore

ENGLISH SUMMARY…

If JDS gets just 30-40 seats in the coming elections I will retire from politics: Former CM HDK
Mysuru, October 20, 2022 (www.justkannada.in): “If JDS gets only 30-40 seats this time in the coming elections I will stay away from politics. This is my decision,” said former Chief Minister H.D. Kumaraswamy.
Speaking in Mysuru today, he said, “the MLAs of our party should not be in a misconception that I will be the Chief Minister even if JDS get 30-40 seats. We will make some person the Chief Minister and I will guide him.”
Kharge will be another power center for Karnataka
Responding to Mallikarjun Kharge being elected as the President of AICC, H.D. Kumaraswamy said that it is Congress party’s internal matter. “However, we feel happy as a Kannadiga has adorned the coveted post. Earlier, Nijalingappa was the AICC President. But the Congress party then and now is different. Let us wait and see whether Khargeji will get the opportunity of functioning independently. For Karnataka he will be another power center,” he observed.
On the occasion, H.D. Kumaraswamy pleaded the people of the state to help him win with a majority. “I promise to implement our 5 projects in 5 years. If I fail in it I will dissolve the party itself. I am saying these words standing in the sacred Chamundi hill. If the five-point program has to be implemented, it will not be possible from an alliance government. It will be possible only if we get complete majority. That is why I am saying that I will not become the CM if there will be an alliance government, he added.
Nikhil Kumaraswamy’s contest in Assembly election
The former Chief Minister hinted about the contest of his son Nikhil Kumaraswamy in the coming assembly elections. “The JDS party’s 126 candidates list is ready. Nikhil has decided to tour the state by using his own strengths. His name might be there in the list of 126 candidates which is ready now,” he said.
Keywords: Former CM H.D. Kumaraswamy/ JDS/ 5-point program