ಬೆಂಗಳೂರು,ಡಿಸೆಂಬರ್,9,2020(www.justkannada.in): ಭೂಸುಧಾರಣಾ ತಿದ್ದುಪಡಿ ಬಿಲ್ ಗೆ ಜೆಡಿಎಸ್ ಬೆಂಬಲ ನೀಡಿದ್ದು ಏಕೆ ಎಂಬುದನ್ನ ನಾಳೆ ವಿವರಿಸುತ್ತೇವೆ ಎಂದು ಜೆಡಿಎಸ್ ಎಂಎಲ್ ಸಿ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಸವರಾಜ ಹೊರಟ್ಟಿ, ನಿನ್ನೆ ನಾನು ವಿಧಾನ ಪರಿಷತ್ ನಲ್ಲಿ ಇರಲಿಲ್ಲ. ಒಂದಷ್ಟು ಗೊಂದಲವಾಗಿ ಕೆಲವರು ಬೆಂಬಲ ನೀಡಿದ್ದಾರೆ. ಜೆಡಿಎಸ್ ನ ಕೆಲ ಸದಸ್ಯರು ಬೆಂಬಲ ನೀಡಿರುವುದು ನಿಜ. ಹೆಚ್.ಡಿ.ಕುಮಾರಸ್ವಾಮಿ ಬೇಡಿಕೆ ಈಡೇರಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಇಂದಿನ ರಾಜಕಾರಣದಲ್ಲಿ ಸಿದ್ಧವಿದೆ. ಅಂದ್ಕೊಂಡಿದ್ದೀರಾ? ನಾವೂ ಕೂಡ ಅದಕ್ಕೆ ಹೊರತಾಗಿಲ್ಲ. ಕಲುಷಿತ ರಾಜಕಾರಣದಲ್ಲಿ ನಾನು ಏನೂ ಹೇಳುವುದಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
Key words: JDS- Support – Lands Amendment Act-Basavaraja horatti- reaction