ಹಾಸನ,ಫೆಬ್ರವರಿ,18,2023(www.justkannada.in): ಪ್ರಜ್ವಲ್ ರೇವಣ್ಣ ವಿರುದ್ಧದ ಕೇಸ್ ನಲ್ಲಿ ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಎ.ಮಂಜುಗೆ ಜೆಡಿಎಸ್ ಟಿಕೆಟ್ ಕೊಡಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ ನಡೆಸಿದರು.
ಹೊಳೇನರಸಿಪುರ ಜೋಗಿಕೊಪ್ಪಲಿನಲ್ಲಿ ಮಾತನಾಡಿದ ಶಾಸಕ ಎ.ಟಿ ರಾಮಸ್ವಾಮಿ, ಹೆಚ್.ಡಿ ದೇವೇಗೌಡರನ್ನ ಇವರೆಲ್ಲಾ ಉತ್ಸಹ ಮೂರ್ತಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದಾರೆ. ದೇವೆಗೌಡರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ಸರಿಯಾಗಿ ಆಸ್ತಿ ಘೋಷಿಸದ ಹಿನ್ನೆಲೆ ಕೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ವಿಚಾರಣೆ ನಡೆಯುತ್ತಿತ್ತು. ನ್ಯಾಯಾಲಯದಿಂದ ಶಿಕ್ಷೆ ಆಗುವ ಸಂದರ್ಭ ಬಂದಿತ್ತು. ಹೀಗಾಗಿ ಕೇಸ್ ನಲ್ಲಿ ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಎ.ಮಂಜುಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಹೆಚ್.ಡಿ ರೇವಣ್ಣರನ್ನ ರಾವಣನಿಗೆ ಹೋಲಿಕೆ ಮಾಡಿದ ಎ.ಟಿ ರಾಮಸ್ವಾಮಿ, ರಾವಣನಿಗೆ ಸಕಲ ಐಶ್ವರ್ಯದ ಜೊತೆ ಶಕ್ತಶಾಲಿ ಅಸ್ತ್ರ ಇದ್ದವು. ಅದರೆ ಅವನು ನಾಶನಾದ. ಯಾವುದಕ್ಕೆ ಆದಿ ಎಂಬುದು ಇರುತ್ತದೆಯೂ ಅದಕ್ಕೆ ಅಂತ್ಯವೂ ಇರುತ್ತದೆ. ಕೆಲವು ಜನ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುತ್ತಾರೆ ನಾನು ರಾಜಕೀಯದಿಂದ ಹಿಮ್ಮುಖವಾಗುವ ಸಂದರ್ಭವೇ ಇಲ್ಲ. ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಸ್ಪಷ್ಟನೆ ನೀಡಿದರು.
Key words: JDS-ticket-A. Manju – compromise – case – MLA -AT Ramaswamy – HD Revanna.