ಬೆಂಗಳೂರು, ಆಗಸ್ಟ್ 07, 2021 (www.justkannada.in): ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಜೆಇಇ ಸೆಷನ್ 3 ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ jeemain.nta.nic.in.ನಲ್ಲಿ ವೀಕ್ಷಿಸಬಹುದಾಗಿದೆ.
ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್ನ್ನು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು jeemain.nta.nic.inನಲ್ಲಿ ಕೀಲಿ ಉತ್ತರವನ್ನು ನೋಡಬಹುದು ಹಾಗೂ ಡೌನ್ಲೋಡ್ ಮಾಡಬಹುದಾಗಿದೆ.
ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವು jeemain.nta.nic.in ನಲ್ಲಿ ಲಭ್ಯವಿದೆ. ಇಲ್ಲಿ ನೀವು JEE Main 2021 Result ನ್ನು ಆಯ್ಕೆ ಮಾಡಬೇಕು. ಇದಾದ ಬಳಿಕ ನಿಮ್ಮ ಅರ್ಜಿ ಸಂಖ್ಯೆ ಹಾಗೂ ಕೇಳಲಾಗುವ ಮಾಹಿತಿಯನ್ನು ಒದಗಿಸಬೇಕು. ಇದಾದ ಬಳಿಕ ನಿಮ್ಮ ಜೆಇಇ ಫಲಿತಾಂಶವು ಪರದೆ ಮೇಲೆ ಕಾಣಿಸಲಿದೆ.
ಜೆಇಇ ಫಲಿತಾಂಶವನ್ನು ನೋಡುವ ವಿಧಾನ :
ಹಂತ 1 : ಅಧಿಕೃತ ವೆಬ್ಸೈಟ್ – jeemain.nta.nic.in ಗೆ ಭೇಟಿ ನೀಡಿ
ಹಂತ 2 : JEE Main 2021 Result ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಅರ್ಜಿ ಸಂಖ್ಯೆ ಹಾಗೂ ಕೇಳಲಾಗುವ ವಿವರಗಳನ್ನು ಒದಗಿಸಿ.
ಹಂತ 4: ಪರದೆಯ ಮೇಲೆ ಜೆಇಇ ಫಲಿತಾಂಶ ಗೋಚರವಾಗಲಿದೆ.
ಹಂತ 5: ನಿಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಿ.