ಮೈಸೂರು, ಫೆ.07, 2021 : (www.justkannada.in news) : ಮಾನನಷ್ಟ ಮೊಕದ್ದಮೆ ಪ್ರಕರಣವೊಂದ ಪುನರೀಕ್ಷಣ (revision) ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮೈಸೂರಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೋಟಿಸ್.
ಅರ್ಜಿದಾರ, ಮೈಸೂರಿನ ಅನಿಮಲ್ ಫೆಲ್ ಫೇರ್ ಟ್ರಸ್ಟ್ ನ ಡಾ.ಮಿತ್ತಲ್ ಎಂಬುವವರು ಮೇನಕಾ ಗಾಂಧಿ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನ್ಯಾಯಾಲಯದಲ್ಲಿ ಪುನರೀಕ್ಷಣ ಅರ್ಜಿ ಸಲ್ಲಿಸಲಾಗಿತ್ತು.
ಈ ಬಗ್ಗೆ ವಕೀಲರಾದ ಎಚ್.ಬಿ.ಪ್ರಭು ‘ ಜಸ್ಟ್ ಕನ್ನಡ ‘ ಜತೆ ಮಾತನಾಡಿ, ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇನಕಾ ಗಾಂಧಿ ಅವರ ಹಾಜರಿಗೆ ನ್ಯಾಯಾಲಯ ನೋಟಿಸ್ ಹೊರಡಿಸಿದ್ದು, ಪ್ರಕರಣವನ್ನು ಮಾ.1 ಕ್ಕೆ ನಿಗಧಿಪಡಿಸಿದೆ ಎಂದರು.
ಏನಿದು ಪ್ರಕರಣ :
ಅಖಿಲ ಭಾರತ ಅನಿಮಲ್ ವೆಲ್ ಫೇರ್ ಸೊಸೈಟಿಯ ಸದಸ್ಯರಿಗೆ ಸಂಬಂಧಿಸಿದಂತೆ, ಅಂದಿನ ಕೇಂದ್ರ ಸಚಿವೆ ಮೇನಕಾ ಗಾಂಧಿ ಕೆಲ ಆರೋಪಗಳನ್ನು ಮಾಡಿದ್ದರು. ಅಲ್ಲದೆ ಈ ಸಂಬಂಧ ಅಂದಿನ ಕೇಂದ್ರದ ಪರಿಸರ ಸಚಿವರಾಗಿದ್ದ ಡಾ.ಹರ್ಷವರ್ಧನ್ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಈ ಪತ್ರದದಲ್ಲಿ AWBI ಸದಸ್ಯರ ವಿರುದ್ಧ ಆರೋಪ ಮಾಡಿದ್ದರು.
ಈ ಆರೋಪಗಳಿಗೆ ಸಂಬಂಧಿಸಿದಂತೆ ಎಸ್.ಕೆ.ಮಿತ್ತಲ್ , ಮೇನಕಾ ಗಾಂಧಿ ಅವರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದರು. ಆದರೂ ಇದಕ್ಕೆ ಕಿವಿಗೊಡದೆ, ಆರೋಪ ಮಾಡುವುದನ್ನು ಮುಂದುವರೆಸಿದ್ದರು. ಆದ್ದರಿಂದ ಮೇನಕಾ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಯಿತು ಎಂದು ಎಸ್.ಕೆ.ಮಿತ್ತಲ್ ಜಸ್ಟ್ ಕನ್ನಡ ಗೆ ಮಾಹಿತಿ ನೀಡಿದರು.
ಮೇನಕಾ ಗಾಂಧಿ ವಿರುದ್ಧ , ಎಸ್.ಕೆ.ಮಿತ್ತಲ್ ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಜೆಎಂಎಫ್ ಸಿ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ, ಅದನ್ನು ಪ್ರಶ್ನಿಸಿ ಸೆಷನ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಹೊರಡಿಸಿ ಮಾರ್ಚ್ 1 ಕ್ಕೆ ಮುಂದೂಡಿದೆ.
ooooooo
KEY WORDS : former-central- minister-Maneka-Gandhi-accuses-animal-panel-members-deformation-case-by-Mittal-AWBI-mysore-court-serve-notice.