JK EXCLUSIVE : ಸರಕಾರದಿಂದ ಸಿಎಟಿಗೆ : ಈ ಸಮಯದಲ್ಲಿ ಕೋವಿಡ್ ನಿರ್ವಹಣೆ ಅತ್ಯಂತ ನಿರ್ಣಾಯಕ.

 

ಮೈಸೂರು, ಡಿ.23, 2020 : (www.justkannada.in news) ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ಕ್ರಮ ಸಮರ್ಥಿಸಿ ಸಿಎಟಿಗೆ ಸರಕಾರ ಸಲ್ಲಿಸಿರುವ ಅಫಿಡವೆಟ್ ಗೆ ಪೂರಕವಾದ ಮಾಹಿತಿ ಸಲ್ಲಿಸಿರುವ ವಕೀಲರು, ವರ್ಗಾಯಿತ ಡಿಸಿ ಬಿ.ಶರತ್ ಅರ್ಜಿ ತಿರಸ್ಕರಿಸಲು ಮನವಿ ಮಾಡಿದ್ದಾರೆ.

ಡಿ.22 ರಂದು ಸಿಎಟಿಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ವಕೀಲರು ಸಲ್ಲಿಸಿರುವ ದಾಖಲೆ ‘ಜಸ್ಟ್ ಕನ್ನಡ’ಗೆ ಲಭಿಸಿದೆ. ಇದರಲ್ಲಿ ಇಬ್ಬರು ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಅಂಕಿ, ಅಂಶಗಳ ಮಾಹಿತಿ ನೀಡಲಾಗಿದೆ. ಜತೆಗೆ ಈ ಸಮಯದಲ್ಲಿ ಕೋವಿಡ್ ನಿರ್ವಹಣೆ ಅತ್ಯಂತ ನಿರ್ಣಾಯಕ ಎಂಬುದನ್ನು ಗಮನಕ್ಕೆ ತರಲಾಗಿದೆ.

Teachers,solve,problems,Government,bound,Minister,R.Ashok

ನಾಲ್ಕುಪುಟಗಳ ವಿವರಣೆಯಲ್ಲಿ, ಮೈಸೂರಿನ ಕೋವಿಡ್ ಮಾಹಿತಿಯನ್ನು ವಿವರಿಸಲಾಗಿದೆ. ಇದರಲ್ಲಿ ಬಿ.ಶರತ್, ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರಕ್ಕೂ ಮುನ್ನ ಜಿಲ್ಲೆಯ ಕೋವಿಡ್ ಸ್ಥಿತಿ ಹಾಗೂ ನಂತರದ ಸ್ಥಿತಿ ವಿವರಿಸಲಾಗಿದೆ.

ಶರತ್ ಜಿಲ್ಲಾಧಿಕಾರಿ ನೇಮಕಗೊಳ್ಳುವ ಮುನ್ನ ಅಂದರೆ, 24.08.2020 ರ ಅವಧಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 2711 ಆಕ್ಟೀವ್ ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಬಿ.ಶರತ್ ಅಧಿಕಾರ ಸ್ವೀಕರಿಸಿದ ಬಳಿಕದ ಅವಧಿಯಲ್ಲಿ ಅಂದರೆ 30.09.2020 ರಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸಕ್ರೀಯ ಪ್ರಕರಣಗಳ ಸಂಖ್ಯೆ 7110 ಕ್ಕೆ ಏರಿಕೆಯಾಯ್ತು.

ಇದರಿಂದ ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿತ್ತು. ಬಿಬಿಎಂಪಿ ಹೊರತು ಪಡಿಸಿದರೆ ನಂತರದ ಸ್ಥಾನಕ್ಕೆ ಮೈಸೂರು ತಲುಪಿತ್ತು. ಈ ಹಂತದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರೋಹಿಣಿ ಸಿಂಧೂರಿ, ಒಂದು ತಿಂಗಳ ಅವಧಿಯಲ್ಲೇ ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಜಿಲ್ಲೆಯಲ್ಲಿನ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1437 ಕ್ಕೇ ಇಳಿಕೆಯಾಯ್ತು.
ಇದು ಬಿ.ಶರತ್ ಅವಧಿಯಲ್ಲಿದ್ದ ಕೋವಿಡ್ ಪಾಸಿಟಿವ್ ಸಂಖ್ಯೆಯ, 5 ಪಟ್ಟು ಕಡಿಮೆ.

ಈ ಗುರಿ ತಲುಪಲು ಸಾಧ್ಯವಾದದ್ದು ರೋಹಿಣಿ ಸಿಂಧೂರಿ ಅವರ ಸಾಧನೆ. ಜತೆಗೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ನಾಡ ಹಬ್ಬ ದಸರ ಮಹೋತ್ಸವ ಸಹ ಇದೇ ವೇಳೆಯಲ್ಲಿ ( ಅಕ್ಟೋಬರ್) ಆಚರಿಸುತ್ತಿದ್ದದ್ದು. ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೇವಲ 337 ಮಾತ್ರ.

Mysore-dc-rohini-sindoori-b.sharath-CAT-affidavit-court

ಕೋವಿಡ್ ನಂಥ ಪೆಂಡಮಿಕ್ ನಿಯಂತ್ರಿಸುವ ಸಲುವಾಗಿಯೇ ಮುಖ್ಯಮಂತ್ರಿಗಳು ತಮಗಿರುವ ಅಧಿಕಾರ ಬಳಸಿಕೊಂಡು ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ನೇಮಕ ಮಾಡಿದ್ದು. ಆದ್ದರಿಂದ ಈ ಪರಿಸ್ಥಿತಿಯಲ್ಲಿ ಬಿ.ಶರತ್ ಅವರ ಅರ್ಜಿಯನ್ನು ಪರಿಗಣಿಸುವುದು ಸೂಕ್ತವಲ್ಲ. ಜತೆಗೆ ಸರಕಾರ ಸಲ್ಲಿಸಿರುವ ಅಫಿಡವೆಟ್ ನಲ್ಲಿ ಶರತ್ ಅವರ ಆರೋಗ್ಯ ಸ್ಥಿತಿ ಬಗೆಗೂ ಮಾಹಿತಿ ಇದೆ. ಈ ಹಂತದಲ್ಲಿ ಮೈಸೂರು ಜಿಲ್ಲಾಧಿಕಾರಿ ಹುದ್ದೆ ನಿಭಾಯಿಸಲು ಅವರು ಮೆಡಿಕಲಿ ಅನ್ ಫಿಟ್ .

ಆದ್ದರಿಂದ ಶರತ್ ರ ಅರ್ಜಿಯನ್ನು ತಿರ್ಸಕರಿಸಿ, ಜತೆಗೆ ಮಾಧ್ಯಮಗಳಲ್ಲಿನ ಸತ್ಯಕ್ಕೆ ದೂರವಾದ ಸುದ್ದಿಗಳಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರ ಜತೆಗೂಡಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ತೊಂದರೆಯಾಗುತ್ತಿದೆ ಎಂದು ಸಿಎಟಿ ಗಮನ ಸೆಳೆಯಲಾಗಿದೆ.

ಎರಡನೇ ಅಲೆ :

mysuru-former-dc-b-sharath-transfer-Rohini Sindhuri -appointed-case-CAT-inquiry-on-october-14 th

ಈಗಾಗಲೇ ವಿಶ್ವದ ಕೆಲವೆಡೆ ಕೋವಿಡ್ ಎರಡನೇ ಅಲೆ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ. ಸ್ಪೇನ್ ದೇಶ ಮಾರ್ಚ್ 2021 ರ ತನಕ ತುರ್ತು ಸ್ಥಿತಿ ಘೋಷಿಸಿದ್ದರೆ, ಯುಕೆ ಒಂದು ತಿಂಗಳ ಲಾಕ್ ಡೌನ್ ಘೋಷಿಸಿದೆ. ಫ್ರಾನ್ಸ್ 2 ವಾರಗಳ, ಜರ್ಮನಿ 4 ವಾರಗಳ ಲಾಕ್ ಡೌನ್ ಘೋಷಿಸಿದೆ. ಇಟಲಿ ಸಹ ಸದ್ಯದಲ್ಲೇ ಇದೇ ಹಾದಿ ಹಿಡಿಯಲಿದೆ. ಈ ಎಲ್ಲಾ ದೇಶಗಳಲ್ಲಿ ಕರೋನಾ ಎರಡನೇ ಅಲೆ ತುಂಬ ಅಪಾಯಕಾರಿ ಎಂಬುದನ್ನು ದೃಢಪಡಿಸಿವೆ. ಆದ್ದರಿಂದ ಈ ಹಂತದಲ್ಲಿ ಅತ್ಯಂತ ಜಾಗರುಕರಾಗಿ ಮುಂಜಾಗ್ರತಾ ಕ್ರಮ ಜರುಗಿಸಬೇಕಾಗಿದೆ. ಕಾರಣ, ಮತ್ತೊಮ್ಮೆ ಲಾಕ್ ಡೌನ್ ಎದುರಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಸಿಎಟಿಗೆ ಮನವರಿಕೆ ಮಾಡಲಾಗಿದೆ.

English summary…

From Govt. to CAT: Covid management decisive at this time
Mysuru, Dec. 23, 2020 (www.justkannada.in): The advocate representing Mysuru DC Rohini Sindhoori has submitted relevant information to the affidavit submitted by the Government, to the CAT defending its move of transferring Rohini Sindhoori as the Deputy Commissioner and has requested CAT to reject the application submitted by transferred DC B. Sharath.
‘JustKannada.in’ has the document submitted by the advocate representing Mysuru Deputy Commissioner Rohini Sindhoori to the CAT on December 22. Details of COVID management during both the DCs have been mentioned in the details. Also it is mentioned how important is COVID management at this crucial hour.
There were 2711 active COVID cases as as on 24.08.2020 i.e. before Sharath took over as the Deputy Commissioner of Mysuru. But the number of active cases increased to7110 on 30.09.2020, after B. Sharath took over the charge.Mysore-dc-rohini-sindoori-b.sharath-CAT-affidavit-court
Mysuru thus had reached second place after BBMP in terms of number of COVID cases. After Rohini Sindhoori took over as the Deputy Commissioner she successfully brought the situation under control, resulting in a decline in the number of COVID positive cases to 1,437, as per the details. Presently there are only 337 cases in Mysuru District.
Keywords: Rohini Sindhoori/ Deputy Commissioner/ Mysore/ B. Sharath/ COVID/ CAT/ Covid management

00000

KEY WORDS : Mysore-dc-rohini-sindoori-b.sharath-CAT-affidavit-court

Govt to CAT: covid management most crucial at this time.