ಮೈಸೂರು,ಜ,10,2020(www.justkannada.in): ಪ್ರಧಾನಿ ಮೋದಿ ಒಬ್ಬ ಸನ್ಯಾಸಿ. ಮೋದಿ ತನ್ನ ಸ್ವಂತಕ್ಕೆ ಏನುಮಾಡೊಲ್ಲ. ಮೋದಿಯನ್ನು ಟೀಕೆ ಮಾಡುವುದು ಕಾಂಗ್ರೆಸ್ ನ ಕೆಲಸವಾಗಿದೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಕಿಡಿಕಾರಿದರು.
ನಗರದ ಕುವೆಂಪು ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾಹಿತಿ ಎಸ್.ಎಲ್ ಭೈರಪ್ಪ, ನಾನು ಸುದ್ದಿ ಆಗಲು ಇಷ್ಟ ಪಡುವುದಿಲ್ಲ. ಈ ದೇಶದ ಬ್ರಿಟಿಷರು ಯಾವ ತಂತ್ರ ಮಾಡಿದ್ರೂ ಅದೇ ರೀತಿ ನೆಹರು ಆಡಳಿತ ಮಾಡಿದ್ರು. ಹಿಂದೂಗಳನ್ನು ಜಾತಿಗಳಿಂದ ಹೊಡೆದಿದ್ದಾರೆ. ಹಿಂದೂಗಳಿಗೆ ಬ್ರೂಟ್ ಮೇಜಾರಿಟಿ ಇದೆ. ನಿಮ್ಮನ್ನು ತುಳಿದುಬಿಡ್ತಾರೆ ಅಂತ ಮುಸಲ್ಮಾನರಿಗೆ ಹೇಳಿದ್ರು. ಮುಸ್ಲೀಂ ಸಮುದಾಯದರನ್ನು ಓಟ್ ಬ್ಯಾಂಕ್ ಆಗಿ ಸೃಷ್ಠಿ ಮಾಡಿದ್ರು. ಇದು ಕಾಂಗ್ರೆಸ್ ಪಕ್ಷದ ಐಡಿಯಾಲಜಿ ಎಂದು ಟೀಕಿಸಿದರು.
ಮೋದಿ ಒಬ್ಬ ಸನ್ಯಾಸಿ. ಮೋದಿ ತನ್ನ ಸ್ವಂತಕ್ಕೆ ಏನುಮಾಡೊಲ್ಲ. ಮೋದಿಯನ್ನು ಟೀಕೆ ಮಾಡುವುದು ಕಾಂಗ್ರೆಸ್ ನ ಕೆಲಸವಾಗಿದೆ. ಅವ್ರನ್ನ ಇಳಿಸಿ ಅಂತಾರೆ ಅವರ ಬೇರೆ ಪರ್ಯಾಯ ನಾಯಕ ಯಾರು…? ಕಾಶ್ಮೀರ ದಲ್ಲಿ 370 ಕಾಯ್ದೆಯನ್ನು ತೆಗದುಹಾಕಿದ್ರು. ಈ ರೀತಿಯ ಧೈರ್ಯದ ಕೆಲಸ ಮಾಡಿದ್ದಾರೆ. ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ಕಾಂಗ್ರೆಸ್ ಗುರಿ. ಇವರ ನಂತರ ದೇಶದ ಪ್ರಧಾನಿ ಯಾರು..? ಎಂದು ಪ್ರಶ್ನಿಸಿದರು.
ಜೆ ಎನ್ ಯು ವಿದ್ಯಾರ್ಥಿಗಳನ್ನು ತಮ್ಮ ಸ್ವಾರ್ಥಗಾಗಿ ಬಳಸಿದ್ದಾರೆ. ವಿದ್ಯಾರ್ಥಿಗಳು ಕೇಳಬೇಕುರುವುದನ್ನ ತಮ್ಮ ಶೈಕ್ಷಣಿಕವಾಗಿ ಕೇಳಬೇಕು. ದೇಶದಲ್ಲಿ ಯಾವ ವಿವಿಗೂ ಕೊಡದ ಹಣವನ್ನ ಜೆಎನ್ ಯುಗೆ ನೀಡ್ತಾರೆ ಎಂದು ಎಸ್.ಎಲ್ ಭೈರಪ್ಪ ಹೇಳಿದರು.
ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್ ಅದಕ್ಕೂ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ…
ಬೇರೆ ಯಾವುದೇ ವಿವಿಗೆ ಸಿಗದಷ್ಟು ಹಣ ಜೆ ಎನ್ ಯುಗೆ ಸಿಕ್ತಿದೆ. ಬೇರೆ ವಿವಿಗಳು ಅದನ್ನೇ ಅನುಕರಣೆ ಮಾಡ್ತಿವೆ. ಯಾವುದೇ ವಿವಿಗಳಿಗೆ ನಡೆಯುತ್ತಿರೋದು ತೆರಿಗೆ ಹಣದಿಂದ. ವಿದ್ಯಾರ್ಥಿಗಳು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಧ್ಯಯನಕ್ಕೆ ಕೊರತೆ ಇರುವುದನ್ನು ಪೂರೈಸಿ ಅಂತಾ ಕೇಳಬೇಕು. ಕೊಠಡಿಯಲ್ಲಿ ಉಪಾಧ್ಯಾಯರನ್ನು ಪ್ರಶ್ನೆ ಮಾಡುವ ಸ್ವಾತಂತ್ರ್ಯ ಇರಬೇಕು ಅಂತಾ ಬಯಸಲಿ ಎಂದು ಎಸ್.ಎಲ್ ಭೈರಪ್ಪ ಸಲಹೆ ನೀಡಿದರು.
ನಾನೂ ಕೂಡ ಉಪಾಧ್ಯಾಯನಾಗಿ ನಿವೃತ್ತಿ ಪಡೆದಿದ್ದೇನೆ. ನಾನು ಚಿಕ್ಕಂದಿನಿಂದ ಬಹಳ ಕಷ್ಟಪಟ್ಟು ಓದಿದ್ದಕ್ಕೆ ಈವತ್ತು ಲೇಖಕನಾಗಲು ಸಾಧ್ಯವಾಯ್ತು. ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್ ಅದಕ್ಕೂ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ. ವಿದ್ಯಾರ್ಥಿಗಳನ್ನು ಅಡ್ಡ ದಾರಿಗೆ ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಡೆದು ಆಳುವ ನೀತಿ ಕಾಂಗ್ರೆಸ್ ಗೆ ಸೀಮಿತವಲ್ಲ. ಎಲ್ಲಾ ಪಕ್ಷಗಳು ಒಟ್ಟಿಗೆ ಸೇರಿ ತಮ್ಮ ನೀತಿ ಬದಲಿಸಿಕೊಳ್ಳಬೇಕಾಗಿದೆ.
ಮತದಾನವೇ ಶುದ್ದೀಕರಿಸಿಬೇಕು. ಸ್ವಾತಂತ್ರ್ಯ ಬಂದ ಬಳಿಕ ಫಕ್ರುದ್ದೀನ್ ಆಲಿ ಪಶ್ಚಿಮ ಬಂಗಾಳದ ಮೂಲಕ ವಲಸಿಗರನ್ನು ಅತೀ ಹೆಚ್ಚು ತುಂಬಿದರು. ಅಸ್ಸಾಂನಲ್ಲಿ ದೊಡ್ಡ ಚಳವಳಿಯಾಯಿತು. ಅದಕ್ಕಾಗಿಯೇ ತಮಗೆ ವಿಧೇಯರಾಗಿರಲು ಇಂದಿರಾಗಾಂಧಿ ರಾಷ್ಟ್ರಪತಿ ಹುದ್ದೆ ಕೊಟ್ಟಿದ್ರು ಎಂದು ಹೇಳಿದರು.
ಕನ್ನಡ ಭಾಷಾ ಮಾಧ್ಯಮ ಕುರಿತು ಚರ್ಚಿಸಲು ನಾನು ಮತ್ತು ಕಂಬಾರರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದೆ. ನಾನು ಎಷ್ಟು ಸಿದ್ದನಾಗಿದ್ದೆನೋ ಅದಕ್ಕಿಂತ ಹೆಚ್ಚು ಮಾಹಿತಿ ಅವರಲ್ಲಿತ್ತು. ಅವರು ನಿಜಕ್ಕೂ ಬುದ್ದಿವಂತರು. ವಿಶ್ವದ ಅನೇಕ ದೇಶಗಳಲ್ಲಿ ಮುಸ್ಲಿಮರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಇದೆ. ಭಾರತದಲ್ಲೂ ಇದೆ ಆಗಬೇಕು ಅಂದ್ರೆ ಹೇಗೆ.? ಮೊದಿ ಮುಸ್ಲಿಂ ರಾಷ್ಟ್ರಗಳ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿದ್ದಾರೆ. ಮೋದಿ ಚೋರ್ ಅಂತಾ ವಿದೇಶಗಳಲ್ಲಿ ಪ್ರಚಾರ ಮಾಡಿದ್ರೆ ಹೇಗೆ.? ಅಮೆರಿಕ ಸೇರಿ ಎಲ್ಲಾ ದೇಶಗಳಲ್ಲಿ ಮೆರಿಟ್ ಇದ್ದವರಿಗೆ ಆದ್ಯತೆ ಕೊಟ್ಟಿದ್ರಿಂದ ಹೆಚ್ಚು ಭಾರತೀಯರಿದ್ದಾರೆ.? 23 ವರ್ಷ ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರಿಗೆ ಆಸ್ಪದ ನೀಡಿದ್ರಿಂದ ಎನ್.ಆರ್.ಸಿ ಅನುವಾರ್ಯ ಆಯ್ತು ಎಂದು ಎಸ್ ಎಲ್ ಭೈರಪ್ಪ ಹೇಳಿದರು.
Key words: JNU -used – students – selfishness-Congress – criticize -PM Modi – writer-SL Byrappa