ಮೈಸೂರಿನಲ್ಲಿ ‘ಉದ್ಯೋಗ ಮೇಳ’ಕ್ಕೆ ಸಚಿವ ಶಿವರಾಂ ಹೆಬ್ಬಾರ್ ಚಾಲನೆ: ಸಾವಿರಾರು ಉದ್ಯೋಗಾಕಾಂಕ್ಷಿಗಳ ಆಗಮನ…

ಮೈಸೂರು,ಫೆಬ್ರವರಿ,19,2021(www.justkannada.in): ಕೊರೋನಾದಿಂದ ಕೆಲಸವಿಲ್ಲದೇ ಕಂಗಾಲಾಗಿರುವ  ವಿದ್ಯಾವಂತ ಯುವಕ ಯುವತಿಯರಿಗಾಗಿ ಮೈಸೂರಿನಲ್ಲಿ ಇಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ‘ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ’ಯಡಿಯಲ್ಲಿ ನಗರದ  ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು, 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳಕ್ಕೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಉದ್ಯೋಗ ಮೇಳದಲ್ಲಿ ಬೆಮಲ್,  ಮಂಡೋವಿ ಮೋಟಾರ್ಸ್, ಹೊಂಡಾ ಹಾಗೂ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಅಥವಾ ಯಾವುದೇ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಿದೆ. ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪ್ರಕ್ರಿಯೆ  ನಡೆಸಿ ಆದೇಶ ನೀಡಲಾಗುತ್ತಿದೆ. ಇನ್ನು  ಉದ್ಯೋಗ ಮೇಳಕ್ಕೆ  ಸಾವಿರಾರು ಉದ್ಯೋಗಾಕಾಂಕ್ಷಿಗಳು ಲಗ್ಗೆ ಇಟ್ಟಿದ್ದಾರೆ. job fair – Mysore- Minister- Shivaram Hebbar -thousands - job

ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೋವಿಡ್ ನಿಂದ ಬಹಳ ಕಷ್ಟವಾಗಿದೆ.  ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಹೋಲಿಸಿದಾಗ ಮಧ್ಯೆ 6 – 7 ತಿಂಗಳು ಬಹಳ ಕಷ್ಟದ ದಿವಸವಾಗಿತ್ತು. ಆದರೆ ಇವತ್ತು ನಮ್ಮ ರಾಜ್ಯದಲ್ಲಿ ಶೇ.90 ಕಾರ್ಖಾನೆಗಳು ಚಾಲುವಾಗಿದೆ. ವರದಿ ಬಂದಿರುವ ಪ್ರಕಾರ ಶೇ 76 % ಗಿಂತ ಹೆಚ್ಚು ಕಾರ್ಮಿಕರ ವಾಪಸ್ ಬಂದಿದ್ದಾರೆ ಎಂದರು.

ಇವತ್ತಿಗೆ ಕೋವಿಡ್ ಮುಗಿದ ಅಧ್ಯಾಯ.ಇನ್ನು ಸರ್ಕಾರ ಸಾಕಷ್ಟು ಜಾಗೃತದಿಂದ ಮತಷ್ಟು ಎಚ್ಚರಿಕೆ ವಹಿಸಿದೆ. ಆ ಹಿನ್ನೆಲೆಯಲ್ಲಿ ಸಹಜ ಸ್ಥಿತಿಗೆ ಅತೀ ಶೀಘ್ರದಲ್ಲೇ ಬರುತ್ತೆ, ಮತ್ತು ಉದ್ಯೋಗದ ತೊಂದರೆ ಆಗುವುದಿಲ್ಲ. ನಮ್ಮ ಸ್ನೇಹಿತ ರಾಮದಾಸ್ ನೇತೃತ್ವದಲ್ಲಿ ಬಹಳ ಉತ್ತಮವಾದ ಉದ್ಯೋಗ ಮೇಳ ಅಯೋಜಿಸಿದ್ದಾರೆ. ಸರ್ಕಾರದ ಪರವಾಗಿ ರಾಮದಾಸ್ ರವರಿಗೆ ಅಭಿನಂದನೆ  ಹೇಳುತ್ತೇನೆ. ಯುವಕರು ಇವತ್ತು ಬಹಳ ಆಶಾಭಾವನೆಯಿಂದ ಇದ್ದಾರೆ. ಎಲ್ಲರಿಗೂ ಉದ್ಯೋಗದ ಆಕಾಂಕ್ಷೆ ಇದೆ, ಆದರೆ ಯುವಕರಲ್ಲಿ ನಾನು ಒಂದು ವಿನಂತಿ ಮಾಡ್ತೀನಿ. ಹಕ್ಕಿನ ಬಗ್ಗೆ ಹೋರಾಟ ಮಾಡೋರು, ಕರ್ತವ್ಯದ ಬಗ್ಗೆ ಪದ್ದತಿ ಇರಬೇಕು ಎಂದು ತಿಳಿಸಿದರು. job fair – Mysore- Minister- Shivaram Hebbar -thousands - job

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ ರಾಮದಾಸ್, ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಎಚ್.ವಿ ರಾಜೀವ್, ಬಿಜಿಪಿ ನಗರಾಧ್ಯಕ್ಷ ಶ್ರೀವತ್ಸ ಉಪಸ್ಥಿತರಿದ್ದರು.

Key words: job fair – Mysore- Minister- Shivaram Hebbar -thousands – job