ಬೆಂಗಳೂರು, ಡಿಸೆಂಬರ್ 25, 2022 (www.justkannada.in): ಉನ್ನತ ಶಿಕ್ಷಣ, ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ವಿದ್ಯುನ್ಮಾನ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣೆಯಾಗಲಿದೆ.
ಈ ಇಲಾಖೆಗಳ ವತಿಯಿಂದ ಡಿಸೆಂಬರ್ ಮಾಸಾದ್ಯಂತ ಸುಶಾಸನ ದಿನ ಆಚರಿಸಿ ಹಲವು ಉಪಯುಕ್ತ ಉಪಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಕುರಿತು ಮಾಹಿತಿ ನೀಡಿದ್ದಾರೆ. ಉನ್ನತ ಶಿಕ್ಷಣ, ಐಟಿ- ಬಿಟಿ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಉತ್ತಮ ಆಡಳಿತಕ್ಕೆ ಭದ್ರ ಬುನಾದಿ ಹಾಕಲು ‘ಸುಶಾಸನ ಮಾಸ: ಸುಂದರ ಸಮಾಜದ ಸಾತ್ವಿಕ ತುಡಿತ’ ಘೋಷವಾಕ್ಯದಡಿ ನಾವು ಡಿ.1ರಂದು ಚಾಲನೆ ನೀಡಿದ್ದೇವು ಎಂದು ಸಚಿವರು ತಿಳಿಸಿದ್ದಾರೆ.
ವಿಶ್ವವಿದ್ಯಾ ನಿಲಯಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಸಹ ವೆಬ್ಸೈಟ್ಗಳಲ್ಲಿ ಪ್ರಕಟಿಸುವ ಕೆಲಸ ನಾವು ‘ಸುಶಾಸನ ಮಾಸ’ ಆಚರಣೆಯ ಅಂಗವಾಗಿ ಕಡ್ಡಾಯ ಗೊಳಿಸಲಾಗಿದ್ದು, ಇದು ಡಿ.10ರಿಂದ ಜಾರಿಗೆ ಬಂದಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.